ಮಂಗಳವಾರ, ಏಪ್ರಿಲ್ 19, 2011

ಸುಮಗಳೇಕೆ ಬಾಡುತ್ತಿವೆ...?!

ಸುಮಗಳರಳಿ ನಗುತ್ತಿವೆ
ತಲೆದೂಗಿ...
ಒಂದು ಬೀಸು ಗಾಳಿಗೆ
"ಹೌದೌದೆಂಬಂತೆ"

ತನ್ನ ನೆಲದಗಲದಷ್ಟಕೇ..
ತಾನೇ ಒಡತಿಯಂತೆ..!
ದುಂಬಿ-ಚಿಟ್ಟೆ ತಬ್ಬಿದರೂ
ಸದ್ದಿಲ್ಲದಂತೆ..!
ಹಕ್ಕಿ ಸಿಪ್ಪೆ ಸುಲಿದರೂ
ಗೊತ್ತಿಲ್ಲದಂತೆ..!

ಮಂಚದಲಿ ಹರವಿದರೆ
ಮಧು-ಚಂದ್ರನ "ಮಂಪರು"..!
ಹೆಣ್ಣ ಮುಡಿಯೇರಿದರೆ
ಬದುಕು ಬಣ್ಣದ ತೇರು..!
ದೇವರ ಪಾದ ತಳಕೆ
ಗಂಧ-ತೀರ್ಥ- ಪ್ರಸಾದ..!

ಗಂಧ,
ಇದ್ದರೆ ಮಕರಂಧ..
ಇಲ್ಲ ಬರೇ ಬಣ್ಣ..!
ಇಹದ ಬದುಕು ಜೀಕುತ್ತಿದೆ
ತಾವೇ ತಮಗೆಂಬಂತೆ..!

ಒಂದು ಸ್ಥಿತಪ್ರಜ಼ೆ..!
ನನ್ನ ಹೆಣದ ಮೇಲೆ
ಮಸಣದಲಿ..
ಸುಮಗಳೇಕೆ ಬಾಡುತ್ತಿವೆ..!?
--------------------------------------------------------
  • ರವಿ ಮೂರ್ನಾಡ್‍

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ