ಮಂಗಳವಾರ, ಏಪ್ರಿಲ್ 19, 2011

ಮನೆಯ ಕಟ್ಟಿಕೊಂಡವರು...

ಅವಳೊಬ್ಬಳಿದ್ದಳು
ಹೆಬ್ಬಂಡೆಯ ಮೇಲೆ
ತಾರಸಿನ ಮನೆಯ ಕಟ್ಟಿಕೊಂಡವಳು !
ಧಾರಾಕಾರ ಮಳೆ,ಗುಡುಗು ಮಿಂಚು
ಭಾರೀ ಚಂಡಮಾರುತ
ಭೋರ್ಗರೆಯುವ
ಸಮುದ್ರದ ಅಲೆಗೆ ಹೆದರಿ
ಮುಂಬಾಗಿಲಿಗೆ ಬೀಗ ಜಡಿದು
ಕೀಲಿಯನ್ನು ಹರಾಜಿಗಿಟ್ಟಳು !
ಅವಳಿಲ್ಲದ ಮನೆ ಎಲ್ಲವೂ ಮುಗಿದ ಮೇಲೂ
ಶಾಶ್ವತವಾಗಿ ತಬ್ಬಲಿಯಾಯಿತು !

ಇವಳೊಬ್ಬಳಿದ್ದಳು
ನೆಲದ ಮೇಲೆ
ಗಟ್ಟಿ ಅಡಿಪಾಯವಿಲ್ಲದ
ಗುಡಿಸಿಲ ಕಟ್ಟಿಕೊಂಡವಳು !
ಧಾರಾಕಾರ ಮಳೆ- ಮಿಂಚು
ಭಾರೀ ಚಂಡಮಾರುತ
ಉಕ್ಕಿ ಬಂದ ನದಿಯ ಕೊರೆತಕ್ಕೆ
ಕುಸಿದು ಬಿದ್ದ ಗುಡಿಸಿಲೊಳಗೆ
ಹಿಡಿ ಮಣ್ಣಾಗಿ ಹೋದಳು !
ಅಳಿದುಳಿದ ಅವಶೇಷಗಳು
ನದಿಯಲ್ಲಿ ಸಾಗರದಲ್ಲಿ
ದಡ ಸೇರಲು ಈಜತೊಡಗಿದವು !
 
-ರವಿ ಮುರ್ನಾಡ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ