- ರವಿ ಮೂರ್ನಾಡ್
ಹಣತೆ ಹಚ್ಚುತ್ತಿದ್ದೇವೆ ನಾವು
ಕತ್ತಲ್ಲಲ್ಲಿ ಮರೆತು ಹೋದ
ನಗುವ ಹುಡುಕುತ್ತಾ..!
ಇತಿಹಾಸದ ಪುಟಗಳ ತಿರುವುತ್ತಾ
ಅಲ್ಲಿ-ಇಲ್ಲಿ ಹುಡುಕಿದ್ದೇವೆ
ಏಸುಕ್ರಿಸ್ತನ ಬೈಬಲ್ ಓದುತ್ತಾ
ಅಲ್ಲಾಹುವಿನ ಕುರಾನ್ ಪಠಿಸುತ್ತಾ
ಕೃಷ್ಣನ ಭಗವದ್ಗೀತೆ ಉಚ್ಚರಿಸುತ್ತಾ
ಶತಶತಮಾನಗಳಿಂದ..
ಕಳೆದು ಹೋದ ಶಾಂತಿಗಳಿಗೆ
ಕೈ ಮುಗಿಯುತ್ತಾ...!
ಚೊಚ್ಚಲ ಮಗುವಿಗೆ ಹೊಟ್ಟೆ ತುಂಬಾ
ಹಾಲು ಸಿಗುವ ತನಕ
ಬಡವನ ರಟ್ಟೆಗೆ ದುಡಿಯುವಷ್ಟು
ಶಕ್ತಿ ತುಂಬುವ ತನಕ
ಹಣತೆ ಹಚ್ಚುತ್ತಲೇ ಇರುತ್ತೇವೆ ನಾವು
ಶತಶತಮಾನಗಳವರೆಗೆ.....
ಕತ್ತಲಲ್ಲಿ ಮರೆತು ಹೋದ
ನೆಮ್ಮದಿ ಹುಡುಕುತ್ತಾ..!
ವೈಭಿಚಾರಕೆ ಹಾಸಿದ ಹಾಸಿಗೆ
ಗೆದ್ದಲು ತಿನ್ನುವವರೆಗೆ
ಪ್ರೀತಿ-ಪ್ರೇಮ-ವಾತ್ಸಲ್ಯಕೆ ಜೀವ
ನಗುವ ಚೆಲ್ಲುವವರೆಗೆ
ಹಣತೆ ಹಚ್ಚುತ್ತಲೇ ಇರುತ್ತೇವೆ ನಾವು
ಶತಶತಮಾನಗಳವರೆಗೆ....
ಕತ್ತಲಲ್ಲಿ ಮರೆತು ಹೋದ
ಪ್ರೀತಿ ಹುಡುಕುತ್ತಾ..!
-------------------------------------------------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ