ಸೋಮವಾರ, ಜನವರಿ 9, 2012

ವಿಲಾಪ ...!


-------------
ಏಕಿಂತ ಕೋಪ ?
ಮುಗಿಯದ ಪ್ರಲಾಪ
ಮುಗಿಯದಿದ್ದರೆ ತಣಿಯದೀ
ವಿರಹ ತಾಪ !

ಮುಖ ತಿರುಗಿ ನಿಂತರೂ
ನಿನ್ನದೇ ಮುಖ !
ಗಟ್ಟಿ ಗೋಡೆ ಕಟ್ಟಿದರೂ
ನಿನ್ನ ಕಣ್ಣ ದೀಪ !
ಎದೆ ಪರದೆ ಮುಚ್ಚಿದರೂ
ನಗು ಚಿತ್ರರೂಪ  !

ನೀ ಸ್ವಾಭಿಮಾನಿ
ನಾ ನಿನ್ನ ಅಭಿಮಾನಿ
ನಮ್ಮೊಳಗೇ ತಪ್ಪು
ಹೊಂದಿಕೆಯೇ  ಒಪ್ಪು
ಮುಗಿಸಿ ಬಿಡು ಕಣ್ಣೀರು
ತೆರೆದು ಪ್ರೇಮ ಪ್ರಲಾಪ !

ಬಾ ಇಲ್ಲಿ ಹಚ್ಚು
ಪ್ರೇಮದಾ  ಕಿಚ್ಚು
ಓಡಿಸು ಕತ್ತಲೆ ಹುಚ್ಚು
ಜಗದ ತರಗತಿಯೊಳಗೆ
ಬದುಕು ಕಪ್ಪು ಹಲಗೆ
ವಿಧಿ ಬಳಪ ಅದಕೆ !

3 ಕಾಮೆಂಟ್‌ಗಳು:

  1. ಹೊಂದಾಣಿಕೆ ಸುಖ ಜೀವನದ ಪರಮ ರಹಸ್ಯವಂತೆ...
    ಚೆನ್ನಾಗಿ ಮೂಡಿ ಬಂದಿದೆ ಸರ್ ಕವಿತೆ...

    ಪ್ರತ್ಯುತ್ತರಅಳಿಸಿ
  2. ವಿಲಾಪ ಸುಂದರ ಕವನ.

    ವಿರಹ ದುರಿಯ ಕಳೆಯಲೊರಟ ಸಾಂಗತ್ಯ ಗೀತೆ.

    ನೀ ಸ್ವಾಭಿಮಾನಿ ಮತ್ತು ನಾನಿನ್ನ ಅಭಿಮಾನಿ ಅಂತ ಹೇಳುವಾಗಲೇ ನಿಮ್ಮ ಅರ್ಪಣ ಭಾವ ಗೋಚರ.

    ಮೇಡಂ, ಪ್ಲೀಸ್ ಕರಗಿಬಿಡಿ.

    ಪ್ರತ್ಯುತ್ತರಅಳಿಸಿ
  3. ಮುಖ ತಿರುಗಿ ನಿಂತರೂ
    ನಿನ್ನದೇ ಮುಖ !
    ಗಟ್ಟಿ ಗೋಡೆ ಕಟ್ಟಿದರೂ
    ನಿನ್ನ ಕಣ್ಣ ದೀಪ !
    ಎದೆ ಪರದೆ ಮುಚ್ಚಿದರೂ
    ನಗು ಚಿತ್ರರೂಪ... Nice lines sir ..

    ಪ್ರತ್ಯುತ್ತರಅಳಿಸಿ