ಚಿತ್ರ ಕೃಪೆ: ಗೂಗಲ್ |
ಅವರಿಬ್ಬರೂ ಕಾಯುತ್ತಿದ್ದರು
ಒಬ್ಬ ಅಂಗಡಿಯಲಿ ದಿನಸಿ ಕಟ್ಟುತ್ತಾ
ಇನ್ನೊಬ್ಬ ಕ್ಯಾಲಿಫೋರ್ನಿಯಾದ ಗೋಪುರದಲಿ
ಬಾವಲಿಯಾಗುತ್ತಾ
ಆ ನಿನ್ನ ಹುಟ್ಟುಹಬ್ಬದ ಶುಭದಿನದಂದು !
ಗಿರಾಕಿಗಳು ಬರುತ್ತಿದ್ದರು
ದಿನಸಿ ಖಾಲಿಯಾಗುತ್ತಿತ್ತು !
ಮಂದಿ ಮರೆಯಾಗುತ್ತಿದ್ದರು
ಹಗಲು ಸಾಯುತ್ತಿತ್ತು !
ನೀನು ಬರಲಿಲ್ಲವೆಂದು
ಅವನು ಅಂಗಡಿ ಬಾಗಿಲು ಮುಚ್ಚಿ
ಹೊರಟು ಹೋದ !
ಇವನು ಗೋಪುರದಲಿ ಮುಖ ಮುಚ್ಚಿ ಮಲಗಿದ !
ಅವರಿಗೆ ರಾತ್ರಿಯಾಗಿತ್ತು
ಆ ಶುಭದಿನದಂದು !
ನಾನೊಬ್ಬ ಇಲ್ಲಿ ಕಾಯುತ್ತಿದ್ದೆ
ಒಂಟಿ ಕೋಣೆಯಲಿ ನೀನು ನನ್ನವಳೆಂದು !
ಶಬ್ದಗಳ ತಿಕ್ಕಾಟದಲಿ ಕವಿತೆಯೆಂದು
ಆ ನಿನ್ನ ಹುಟ್ಟುಹಬ್ಬದ ಶುಭದಿನದಂದು !
ಹಲ್ಲಿ ಲೊಚಗುಟ್ಟಿತು-ಕತ್ತಲೆಯ ತಬ್ಬಿತು
ರಾತ್ರಿ ಹನ್ನೆರಡಾಯಿತು ಕತ್ತಲೆಯ ಕರೆಯಿತು
ನೀನು ಬೆಳಕು ತರುವೆಯೆಂದು
ನಿನ್ನೆ ಹಗಲನ್ನು ನುಂಗಿದ ರಾತ್ರಿಯ ದೂರಲಿಲ್ಲ !
ತೊಲಗಾಚೆಯೆಂದು
ಇಂದಿನ ರಾತ್ರಿಯ ಹೊರದೂಡಲೂ ಇಲ್ಲ !
ನನಗೆ ರಾತ್ರಿ ಬೇಕಿತ್ತು
ಆ ಶುಭದಿನದಂದು !
ಈಗ.. ನಿನ್ನಲ್ಲಿ ಪ್ರಶ್ನೆ ಗೆಳತಿ
ಆ ದಿನ ನೀನು
ರಾತ್ರಿಯೆಂದು ಮಲಗಿದವರಿಗೆ
ಮರಗುವ ಹೃದಯವೋ ?
ಬದುಕುವ ಹಗಲೋ ?
ಆ ರಾತ್ರಿ ಭಾರಿಸಿ ಮರೆಯಾದ
ಗಂಟೆಯ ಶಬ್ದವೋ
ನನ್ನ ರಾತ್ರಿಯೋ ?!
-ರವಿ ಮೂರ್ನಾಡು.
ಇಲ್ಲಿ ಕಾಯುವಿಕೆಉಅ ಅಪ್ರತಿಮ ವಿರಹ ಸೂಚನೆ ಇಂಚಿಂಚು ಮನ ತಟ್ಟುಟ್ಟಾ ಸಾಗುತ್ತದೆ.
ಪ್ರತ್ಯುತ್ತರಅಳಿಸಿಬಯಸುವುದು ಮತ್ತು ಅದು ದೊರಕದಾಗ ಆಗುವ ಹೃದಯದ ತಲ್ಲಣ ಉತ್ತಮವಾಗಿ ಚಿತ್ರಿತವಾಗಿದೆ.