ಹಲವು ಜನರ ಮೂಲ ಹುಡುಕಿ
ನಮ್ಮವರ ಕತ್ತಲೆಗಳಿಗೆ
ಅರಿವು ಪಡೆದೆವು!
ನಮ್ಮ ಮೂಲ ಹುಡುಕುವಲ್ಲಿ
ಎಡವಿ ಬಿದ್ದೆವು !
ಹೆತ್ತ ತಾಯಿ ದೇವರೆಂದು
ಮಕ್ಕಳಾದೆವು !
ಗುಡಿ-ಮಸೀದಿ-ಚರ್ಚು ನುಗ್ಗಿ
ಭಕ್ತರಾದೆವು !
ಭಕ್ತರಾದೆವು !
ದೇಹದೊಳಗೆ ಮನವ ಬಿಗಿದು
ಚರ್ಮವಾದೆವು !
ಬೀದಿ ನಡೆಗೆ ಬಣ್ಣ ಬಳಿದು
ಬೆತ್ತಲಾದೆವು !
ಊರು ತಪ್ಪು ನೂರು ಮಾಡಿ
ಜಗಳ ಕಾದೆವು !
ಮನೆಗೆ ಹರಿವ ಕೊಚ್ಚೆ ನೊಣಕೆ
ಎಂಜಲಾದೆವು !
ತಪ್ಪ ಒಪ್ಪಿ ನೆಂಟನೆಂದು
ಮೆಚ್ಚಿಕೊಂಡೆವು !
ನಮ್ಮ ನಮ್ಮ ತಪ್ಪುಗಳನು
ಮುಚ್ಚಿಕೊಂಡೆವು !
ನಮ್ಮವರ ಕತ್ತಲೆಗಳಿಗೆ
ದೀಪವಾದೆವು !
ನಮ್ಮ ಮನದ ಕೋಣೆಯಲ್ಲಿ
ಕತ್ತಲಾದೆವು !
ಹಲವು ಜನರ ಯಾತ್ರೆಯನ್ನು
ನೋಡುತ್ತಿದ್ದೆವು !
ನಮ್ಮ ಯಾತ್ರೆಯನ್ನು ನಾವೇ
ಕಾಣದಾದೆವು !
-ರವಿ ಮುರ್ನಾಡು
ಹರ್ಷದ ಕೂಳು ನೋಡಿ
ಪ್ರತ್ಯುತ್ತರಅಳಿಸಿವರ್ಷದ ಕೂಳು ಕಳಕೊಂಡ್ರು
ಅನ್ನುವಂತೆ, ನಾವು ನಮ್ಮದಲ್ಲದ ಬದುಕನ್ನೇ ಅಮೋಘ ಎಂದೆಣಿಸಿ, ಕಣ್ಣ ಮುಂದಿರುವ ಸ್ವರ್ಗವನ್ನು ಎಡಗಾಲಲ್ಲೇ ಒದೆಯುತ್ತಿರುತ್ತೇವೆ.
ಮನೋಚಿಕಿತ್ಸಕ, ಸರಳ ಪ್ರಯೋಗ. ಉತ್ತಮ - ಅತ್ಯುತ್ತಮ.
ಸರಳ ಪದಗಳಲ್ಲಿ ಕಟ್ಟಿದ ಗಟ್ಟಿ ಕವಿತೆ., ಹಣತೆಯ ಅಡಿಯಲ್ಲೇ ಕತ್ತಲೆಯ ತವರು..!! ಈ ಸ್ಮಾಜದ ಪ್ರತಿಯೊಬ್ಬರೂ ಪರರ ಅಂಧಕಾರದೆಡೆಗೆ ಬೆರಳು ಮಾಡಿ ತೋರಿಸುವುದರ ಬದಲು., ನಮ್ಮೊಳಗಿನ ತಮೋ ವಿಕಾರಗಳ ತೊಡೆಯುವ ಕೆಲಸಾವಾದರೆ., ಎಲ್ಲೆಲ್ಲೂ ಪ್ರಭಾವಳಿಯ ಸಿಂಚನವಾಗುವುದು..
ಪ್ರತ್ಯುತ್ತರಅಳಿಸಿSuper. Liked it very much
ಪ್ರತ್ಯುತ್ತರಅಳಿಸಿSwarna