ಉರಿ ಬೆಂಕಿ ಉಸಿರ
ಮನದಲ್ಲೇಕೆ ಸಿಲುಕುವಿರೋ
ಸರಿದು ರಕ್ಶಿಸಿಕೊಳ್ಳಿರೋ
ಧಗ ಧಗನೆ ಉರಿದು ಬೆಂಕಿ
ಸುಮ್ಮನಾಗಲಿ !
ಉ೦ಡ ಹಿಡಿ ಅನ್ನಕೆ
ಉದರಾಗ್ನಿ ಉಕ್ಕಿ
ಉರಿ ಗಂಟಲ ತಿಕ್ಕಿ
ತುಪ್ಪವಾಗಿ ಎಂಜಲು ನಾಲಗೆಯಲಿ !
ಉಗಿದು ತೃಪ್ತಿಗೆ ಹಿಗ್ಗಿ
ತುಟಿಯೊರೆಸಿ ಮತ್ತೆ ಉಗಿದು ಸುಗ್ಗಿ
ಓಡಿ ತಪ್ಪಿಸಿಕೊಳ್ಳಿರೋ
ಬೂದಿಯೊಳಗಿನ ಕೆಂಡ ಬೂದಿಯಾಗಲಿ !
ಹಸಿ ಕೆ೦ಡದ ಹಸಿವು
ಉಣ್ಣುವ ಕರಗಳ ಮುರುಟಿ
ತಾಳದ ನಡೆ ತಪ್ಪಿ ತರಗುಟ್ಟದಿರಲಿ !
ಚರ್ಮ ಸುಟ್ಟರೆ ಸುಡಲಿ
ಕಸಿ ಮಾಡಿ ಮುಖ ಮುಚ್ಚಿ
ಹೇಗಾದರೂ ತಪ್ಪಿಸಿಕೊಳ್ಳಿರೋ
ಕಣ್ಣೀರು ಬೆಂಕಿಗೆ ನದಿ
ಗಂಗೆ ತಾಯಿ ಭಾರತಿ ಪುತ್ರಿ !
-ರವಿ ಮುರ್ನಾಡು
ಒಳ ತೋಟಿಯ ಸಮರ್ಥವಾಗಿ ಬಿಂಬಿಸಿದ ಕವನ. ಇಲ್ಲಿ ಬೆಂಕಿಯ ಒಳಾರ್ಥವನ್ನು ಕೆದುಕುತ್ತಾ ಹೋದರೆ ಅದರ ಅಖಂಡತೆ ಗೋಚರವಾಗುವುದು. ದೇಹವೂ ಮತ್ತು ಹೊರ ಪ್ರಪಂಚವೂ ಅಗ್ನಿಯ ಶಾಖತೆಯ ವಿವಿದಾರ್ಥವೇ.
ಪ್ರತ್ಯುತ್ತರಅಳಿಸಿಬೂದಿಯಾಗಲಿ ಕೆಂಡ, ಹಲ ಭಾವನೆಗಳನ್ನು ಹುಟ್ಟು ಹಾಕಿದ ಅನನ್ಯವಾಗಿ ನಿಲ್ಲುವ ಕವನ.
ಅದು ಒಳಗಣ ಕಿಚ್ಚೆ ಅಲ್ಲವೇ? ಓಡುವುದೆಲ್ಲಿಗೆ? ಸು೦ದರಕವನ ರವಿಯವರೇ, ಅಭಿನ೦ದನೆಗಳು.
ಪ್ರತ್ಯುತ್ತರಅಳಿಸಿ