ಹೇಗೆ ವರ್ಣಿಸುವಿರಿ-
ಅದೇ ಹೊಸ ವರ್ಷದ ಪ್ರಾಸಗಳು ?
ದೊರೆಯದಿರೆ ಸಾವಿರವಾಗಿ-
ಅದೇ ಪುನರಪಿ ಶಬ್ಧಗಳು !
ಹೊಸತು ಮುದ್ದಿಸಿ, ಹಳತು ತುಳಿದು-
ಕನಸು ಹುಟ್ಟಿಸುವೆವು |
ಗೊತ್ತಿದೆ, ಕನಸು ಕಂಡೆವು |
ಕುರುಡು ರಾತ್ರಿಗೆ ಮಲಗಿ ಬಿದ್ದು,
ಎದ್ದು ನಿಲ್ಲುತಾ, ಬೆಳಕು ನಕ್ಕೆವು |
ವಿಶ್ವ ಚುಚ್ಚುವನಕ -
ಶಾಪ ಮುಟ್ಟುವನಕ -
ಬದುಕು ತಬ್ಬಿ
ಬದುಕು ತಬ್ಬಿ
ಹಕ್ಕಿ ಹಾರುವೆವು |
ಬದುಕಿ, ಪ್ರೀತಿಸುವೆವು-
ಗಂಡು-ಹೆಣ್ಣಾಗಿ ನಡೆದು-
ಗಂಡು-ಹೆಣ್ಣಾಗಿ ನಡೆದು-
ವಧುಗಳಂತೆ ಅಲಂಕರಿಸಿ,
ಬೀದಿಗೆ ಹೆಣ ನಡೆವೆವು |
ನಗುವೆವು, ಅತ್ತು ಕರೆ ದು-
ನಂಬಿ ಭಯಗೊಂಡೆವು |
ಅದು ಹೊಸ ವರ್ಷದ -
ಹೊಸ ತೊಂದರೆಗಳು !
-ರವಿ ಮೂರ್ನಾಡು
ಚಿತ್ರಕೃಪೆ:ಗೂತಲ್ ಅಂತರ್ಜಾಲ
ಸಾಂಗತ್ಯದ ಸಾದೃಶ ಅನಾವರಣ ಇಲ್ಲಿದೆ.
ಪ್ರತ್ಯುತ್ತರಅಳಿಸಿಹೊಸ ವರ್ಷದ ನೆಪದಲ್ಲಿ ನಮ್ಮನ್ನು ಸಂಗ ಜೀವಿಯಾಗಿಸುವ ನಿಮ್ಮ ಉಪಾಯ ಅರ್ಥಗರ್ಭಿತ.
ಹೊಸ ವರುಷವು ನಿಮಗೆ ಸಂತಸವನ್ನಲ್ಲದೆ ಬೇರೆ ಏನನನ್ನೂ ತಾರದಿರಲಿ. ನಿಮ್ಮ ನಗು ಅರಳುತಲಿರಲಿ.