ಶನಿವಾರ, ಜನವರಿ 5, 2013

ಜೊತೆಯಲಿ ಬನ್ನಿ ಈ ರಸ್ತೆಗೆ !



ಸ್ವಲ್ಪ ಬನ್ನಿ ಜೊತೆಗೆ
ಈ ನನ್ನ ರಸ್ತೆಗೆ  
ಅಲ್ಪವೇ, ಪಯಣದ ಹೆಜ್ಜೆಯಿದೆ !

ತುಂಬಾ ಚಿಕ್ಕದು
ಈ ರಸ್ತೆಯ ಮಾತು
ಓದಿರಿ, ಇದು ನನ್ನ ಜಗತ್ತು !
ಅರಿಯಿರಿ ಹೆಜ್ಜೆ ಹಜ್ಜೆಗೆ
ನಿಮಗೂ ಇದೇ ರಸ್ತೆ ಬದುಕು !

ಸ್ವಲ್ಪ ಬನ್ನಿ ಜೊತೆಗೆ
ಮೇಲೆ ನೋಡಿ, ಸೂರ್ಯ
ಮುಗ್ಧ ಮಾಡಿದೆ ನಮಗೆ
ಅವನ ಅದ್ಬುತ ಮಂತ್ರದಂಡ 
ನಡೆದಿದ್ದೇವೆ ಕೆಳಗೆ
ಭರವಸೆಯಿದೆ ಭೂಮಿಗೆ |

ಸಾವರಿಸಿಕೊಳ್ಳಿ
ಕಲ್ಲಿದೆಯಿಲ್ಲಿ, ಅದೋ ಗುಂಡಿ |
ಬೆರಳಿದೆ ಹಿಡಿದುಕೊಳ್ಳಿ
ಹೆಜ್ಜೆ ಪಲ್ಲಟಿಸಿ, ಸರಿಯಿದೆಯಿಲ್ಲಿ |
ಕ್ಷಮಿಸಿ,ಚುಚ್ಚದಿರಲಿ ಮುಳ್ಳು
ಇದು ನನ್ನದೇ ರಸ್ತೆ ,ಅರಿತರೆ
ನಿಮಗೂ ಇದೇ ಸುರಕ್ಷೆ |

ಸ್ವಲ್ಪ ಬನ್ನಿ ಜೊತೆಗೆ
ಈಗ ಹೇಳಿ ಬಿಡಿ...
ಎಲ್ಲಿ ತಪ್ಪಿದೆ ಹೆಜ್ಜೆಗೆ ?
ಮರೆಯದಿರಿ,
ತಿದ್ದಿಬಿಡಿ ನೇರ ಸತ್ಯಕೆ |

ಜಗದ ನಡೆಯ ನಾಯಕನೇ
ಪ್ರಾರ್ಥಿಸುತ್ತೇನೆ
ಸತ್ಯವಾಕ್ಯವೇ ಕೇಳಲಿ
ತಾಯ ಗರ್ಭದ ಮಗುವಿಗೆ |
ದೂಡದಿರು ನನ್ನನ್ನು
ಹರಕೆ ಕುರಿಯ ತ್ಯಾಗಕೆ |
-ರವಿ ಮೂರ್ನಾಡು

1 ಕಾಮೆಂಟ್‌:

  1. ಕಟು ವಾಸ್ತವದ ಕಣ್ಣೀರಿನ ಚಿತ್ರಣ.

    ರಸ್ತೆ ನೆಪದಲ್ಲಿ ನಮ್ಮ ಬದುಕುಗಳ ಘೋರ ದುರಂತದ ಸಚಿತ್ರ ವಿವರಣೆ ಸಿಗಿತ್ತಿದೆ ಇಲ್ಲಿ.

    ಕಡೆಯ ಸಾಲುಗಳ ತೀವ್ರ ವಿಷಾದ ನನ್ನೊಳಗೆ ಮಡಗಟ್ಟಿತು.
    " ದೂಡದಿರು ನನ್ನನ್ನು
    ಹರಕೆ ಕುರಿಯ ತ್ಯಾಗಕೆ|"
    ಇದು ನನ್ನದೂ ಪ್ರಾರ್ಥನೆ.

    ಪ್ರತ್ಯುತ್ತರಅಳಿಸಿ