ಬುಧವಾರ, ಫೆಬ್ರವರಿ 27, 2013

ದೇವರು ನಕ್ಕರು ಜನರಿಗೆ !


ಭಾನಿನಿಂದ ಈರ್ವರು ಇಳಿದರು
ಇಲ್ಲೇ ಉಳಿದರು
ಹೋಗಲಾಗದೆ ಬಂದ ದಾರಿಗೆ

ಮುಖಾಮುಖಿ ನಡೆದರು ಮನೆಗೆ
ಜೋಗುಳ ಹಾಡಿದರು,
ಮಕ್ಕಳೇ ನೀವೇ ನಮ್ಮ ಬಾಳಿಗೆ |

ಬತ್ತಿಯಾದರು ಹಗಲು-ರಾತ್ರಿಗೆ
ಬೆರಳ ಹಿಡಿದರು,
ಮನೆಯಂಗಳ ತೋರಿ ಜಗತ್ತಿಗೆ

ಭಾವವಾದರು ನಕ್ಕು ಅಳುವಿಗೆ
ಪ್ರೀತಿ ಸುರಿದರು,
ಜಗದ ಬದುಕು ಗೆಲುವಿಗೆ |

ಭೂಮಿ ತಾಯಿ-ಸೂರ್ಯ,ತಂದೆಗೆ
ದೇವರು ನಕ್ಕರು ಜನರಿಗೆ
ಚರ್ಚು-ಮಸೀದಿ-ಗುಡಿಯೊಳಗೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

1 ಕಾಮೆಂಟ್‌:

  1. ಎಲ್ಲರೂ ಅರಿತುಕೊಳ್ಳ ಬೇಕಾದ ದಿವ್ಯ ಸತ್ಯದ ಅನಾವರಣ ಇಲ್ಲಾಗಿದೆ. ಮನುಜ ಸುಖಾ ಸುಮ್ಮನೆ ದೇವರು - ಧರ್ಮಗಳನ್ನು ಆರೋಪಿಸಿಕೊಂಡು ಮೂಲ ದೇವತೆಗಳಾದ ಸೂರ್ಯ - ಭೂಮಿಗಳನ್ನು ಕಡೆಗಣಿಸುತ್ತಿರುವುದು ಖೇಡವೇ ಸರಿ!

    ಪ್ರತ್ಯುತ್ತರಅಳಿಸಿ