ಬುಧವಾರ, ಡಿಸೆಂಬರ್ 14, 2011

ಮೌನ ಬಿಕ್ಕಳಿಕೆಎಲ್ಲಿ ಮರೆಯಾಗಿ ಬಿಕ್ಕಳಿಸುತ್ತಿದೆ
ಈ ನನ್ನ ಮನ ?
ಸುಕ್ಕುಗಟ್ಟಿದ ಆ ನೆಲದಲಿ
ನನ್ನೊಳಗೆ ಚಿಗುರಿದ
ಓಭಿರಾಯನ ಬಳ್ಳಿ
ಸತ್ತ ಮರಗಳ ತಬ್ಬಿ
ಸತ್ವ ಕಳೆದುಕೊಂಡಿದೆ

ಇಗೋ ಇಲ್ಲಿ ಒಡೆದು ನಾರುತ್ತಿದೆ
ಬಂಜರು ಬಿರುಕಿಟ್ಟ ನಾಲೆ
ಯೌವ್ವನಕ್ಕೆ ಕಣ್ಣುಗಳಿಲ್ಲ !
ಇಗೋ ಇಲ್ಲಿ ನೆತ್ತರು ಹೆಪ್ಪುಗಟ್ಟುತ್ತಿದೆ
ಸೋತು ಎದೆಭಾರದ ಜ್ವಾಲೆ
ಮೋಹಕ್ಕೆ ಬಂಧನವಿಲ್ಲ !
ಬೀಸಿದ ಬಿರುಗಾಳಿಗೆ ದಿಕ್ಕಿಲ್ಲ
ಸೂರ್ಯನ ರಶ್ಮಿಗೆ ನೆಲಯಿಲ್ಲ
ಎಲ್ಲವೂ ಮುಷ್ಠಿ ಬಿಗಿ ಹಿಡಿದು
ಆಕಾಶ-ಜಲ-ಗಾಳಿಯಲಿ
ಅಂತ್ಯವಿಲ್ಲದ ಚಿತ್ತಾರ ಬಿಡಿಸುತ್ತಿವೆ.

ಹಂಗು ತೊರೆದ ಹೃದಯ
ಜೀವ ಕೇಳಿದ ಬೀಜ
ಮಣ್ಣ ವಾಸನೆಗೆ ಮುತ್ತಿಕ್ಕಿ
ತುಟಿಯ ಸುಟ್ಟುಕೊಂಡಿದೆ.

ಲಗ್ಗೆಯಿಡು ಭಾವವೇ....
ಕನಸುಗಳ ಹರಾಜಿಗಿಡುತ್ತೇನೆ
ನಿನ್ನೊಳಗೆ ಹೂವಾಗುತ್ತೇನೆ
ಗುಟುಕು ಪ್ರೀತಿಯ ಪಾತ್ರೆಗೆ
ಹಣೆ ಚಚ್ಚಿ ಬಿಕ್ಕಳಿಸುತ್ತೇನೆ
ಹಾದಿ ಬದಿಯ ಮೈಲುಗಲ್ಲುಗಳಿಗೆ
ಪ್ರೇಮದ ಚಿತ್ತಾರವಾಗುತ್ತೇನೆ
-ರವಿ ಮೂರ್ನಾಡು.


4 ಕಾಮೆಂಟ್‌ಗಳು:

 1. ಓದಿ ಮನದಲ್ಲಿ ಮೂಡುತಿರುವ ಭಾವಗಳು ಅಕ್ಷರಕ್ಕಿಳಿಯಲು ಸೋಲುತಿವೆ...
  ಇಷ್ಟವಾಯಿತೆಂದಷ್ಟೇ ಹೇಳಬಲ್ಲೆ...

  ಪ್ರತ್ಯುತ್ತರಅಳಿಸಿ
 2. ಕನಸುಗಳ ಹರಾಜಿಗಿಡುತ್ತೇನೆ
  ನಿನ್ನೊಳಗೆ ಹೂವಾಗುತ್ತೇನೆ
  ಗುಟುಕು ಪ್ರೀತಿಯ ಪಾತ್ರೆಗೆ
  ಹಣೆ ಚಚ್ಚಿ ಬಿಕ್ಕಳಿಸುತ್ತೇನೆ

  ಆಹಾ..! ಎಂತಹ ಸಾಲುಗಳು ಸರ್...ನೋವಲ್ಲಿ ಸುಖವಾಗುವ ಅದ್ಭುತ ಕಲ್ಪನೆ...ಇಷ್ಟವಾಯ್ತು...

  ಪ್ರತ್ಯುತ್ತರಅಳಿಸಿ