ನೀನೇನು ಕೊಟ್ಟೆ ನನಗೆ ?
ಎಷ್ಟೇ ಚೆಲ್ಲಿದರೂ
ಮುಗಿಯದ ದುಃಖ್ಖದ ಬಿಂದಿಗೆ !
ಮಗುಚಿದರೂ ಕೊನೆಯಿಲ್ಲದ
ನೆನಪಿನ ಹೊತ್ತಗೆ..!
ಒಂದು ಬದುಕಿನ ಕೂಗಿಗೆ
ನೀ ನಡೆದೆ ಹಗಲಿಗೆ
ಬಿಚ್ಚಿದರೂ ಬಿಚ್ಚದ ಗಂಟಿಗೆ
ನಾ ಬಂಧಿಯಾದೆ ರಾತ್ರಿಗೆ..!
ನೀನೇನು ಕಳೆದೆ ನನಗೆ ?
ಒಂದು ಹನಿ ಬೊಗಸೆಗೆ
ಹನಿ ನದಿಯಾಗಿ ನರನಾಡಿಗೆ
ಕಡಲಾಗಿ ನನ್ನೆದೆಗೆ...!
ನಿನ್ನೆರಡು ಕಂಗಳ ಕಾಂತಿಗೆ
ಒಲುಮೆ ಹಚ್ಚಿ ಹಣತೆಗೆ
ನೀನಿಟ್ಟ ಪ್ರೀತಿ ಬತ್ತಿಗೆ
ಕಂಬನಿ ತೈಲಕೆ
ಭಾವಗಳಿದೋ ಹರಾಜಿಗಿವೆ
ನಾಲ್ಕು ದಿನಗಳ ಬಾಳಿಗೆ
ಮನಸ್ಸು ಸಂತೆಯ ಭಿಕರಿಗೆ
ಕನಸುಗಳು ಬೆತ್ತಲೆಯಿದೆ..!
------------------------------------------------
-ರವಿ ಮೂರ್ನಾಡು
Im not having words to comment sir...Superb...!!!
ಪ್ರತ್ಯುತ್ತರಅಳಿಸಿkanasugalu maratakkive....
ee line ne boo sogasaagide....
ಕಂಬನಿಯ ತೈಲ ವ್ಹಾವ್! ಅದಿನ್ನೆಂತಹ ಕವಿ ಪ್ರಯೋಗ ನಿಮ್ಮದು ರವಿ ಸಾರ್? ಸಮರ್ಥ ಕವಿಯ ಸಶಕ್ತ ಕವನ ಇದು.
ಪ್ರತ್ಯುತ್ತರಅಳಿಸಿ