ಎದೆಯೊಳಗೆ ಕುಳಿತರು
ಮನೆಯವರೆಗೆ ಬಂದರು
ಹೊಸ್ತಿಲಲ್ಲೆ ನಿಂತು ಮನೆಯ
ಅಸ್ತಿತ್ವವ ಅಳೆದರು.
ಹೊಸಿಲು ದಾಟಿ ಬಂದರು
ಮನೆಯ ತುಂಬಾ ನಡೆದರು
ಬಡಿಸಿಕೊಟ್ಟ ಅಡುಗೆಯಲ್ಲಿ
ನೂರು ತಪ್ಪು ಸುರಿದರು
ಕಲ್ಲು ಹೆಕ್ಕಿ ಹುಳಿಯ ಹಿಂಡಿ
ತಟ್ಟೆ ಮುಖಕೆ ಎಸೆದರು..
ಬಿಕ್ಕಳಿಕೆಯೇ ತುಂಬಿದೆ
ದುಃಖ್ಖ ಹೊದಿಕೆ ಹಾಸಿದೆ
ಹೋದವರಿಗೆ ಕಿಟಕಿ ತೆರೆದು
ಮನೆಯ ಕೋಣೆ ಕೊರಗಿದೆ
ಇದ್ದವರ ಬಿರುಗಾಳಿಗೆ
ಮನದ ದೀಪ ಬೆಚ್ಚಿದೆ
ಕರಗದಿರಲಿ ದೀಪರೂಪ
ಜಗದ ಬೆಂಕಿ ಕೋಪಕೆ
ಅಂಗಳದಲಿ ಮಲ್ಲಿಗೆ
ಮನೆಯ ಒಳಗೂ ಚೆಲ್ಲಿದೆ
ಕೋಣೆ ತುಂಬಾ ದೀಪದಲ್ಲಿ
ನೂರು ಮನಸ್ಸು ಅರಳಿದೆ
ಬೊಗಸೆಯೊಡ್ಡಿ ಬೇಡುತ್ತಿದೆ
ಮನದ ಕಂಬನಿ ಮೆಲ್ಲಗೆ..!
-----------------------------------------------------------
-ರವಿ ಮೂರ್ನಾಡು
ರವಿ;ಸುಂದರ ಕವನ.ಇಷ್ಟವಾಯಿತು.ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ.ನಮಸ್ಕಾರ.
ಪ್ರತ್ಯುತ್ತರಅಳಿಸಿentha saalugalu
ಪ್ರತ್ಯುತ್ತರಅಳಿಸಿkoneya pyaarada artha tumba ishta aayitu
namagarivilladeye eshto vuaktigalu badukike bandu birugaali ebbisuttaare
innu kelvaru saantvanada gaali beesuttaare
hudukikolluvudu namge bittaddu allave?
ಕವನದ ಶೈಲಿಯಲ್ಲೇ ಮತ್ತು ಭಾವಗಳನ್ನು ಅರಳಿಸುವ ಸಿದ್ಧಿಯಲ್ಲೇ ನಿಮ್ಮ ದೈದೀಪ್ಯಮಾನತೆ ತೆರೆದುಕೊಳ್ಳುತ್ತದೆ.
ಪ್ರತ್ಯುತ್ತರಅಳಿಸಿಮನೆಯೆನ್ನುವ ಖಾಸಗೀ ಜಗತ್ತಿನಲ್ಲಿ ಪರಕೀಯ ಪ್ರವೇಶದ ಮತ್ತು ಅದರ ಸಂಭಾವ್ಯತೆಗಳು ಚೆನ್ನಾಗಿ ಮೂಡಿ ಬಂದಿವೆ.
ವ್ಹಾವ್...
ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com
Face book Profile : Badarinath Palavalli
ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.
ರವಿ, ಮೊದಲ ಹೆಜ್ಜೆ ನಿಮ್ಮ ಭಾವನಾ ಪ್ರಪಂಚಕ್ಕೆ...ಬಹಳ ಸೊಗಸಾದ ಸಾಂಕೇತಿಕತೆ..ಮನೆಗೆ ಬಂದು, ಉಂಡವರ ಉಂಡಾಡಿತನ ಹಲವೊಮ್ಮೆ ರೋಸುತ್ತೆ ಮನ..ಅದೇ ಭಾವ ಎಂದುಕೊಳ್ಳಲೇ...??
ಪ್ರತ್ಯುತ್ತರಅಳಿಸಿ