ಈ ಕಗ್ಗತ್ತಲೆಯಲಿ
ಸಡಿಲಗೊಳ್ಳುತ್ತಿದೆ ಗಾಳಿ
ಪಟ್ಟಣವೋ ದೈತ್ಯ ಪ್ರಾಣಿ
ಹೆಜ್ಜೆ ಹೆಜ್ಜೆಗೆ ನಿಧಾನ
ಚಲಿಸಿದೆ ಮೆರವಣಿಗೆಯಲಿ ।
ಆದರೆ,
ಕೆಳಬಿದ್ದಿವೆ ಕಿಟಕಿ ಪರದೆಗಳು
ಕೇಳಿಸದಾಗಿದೆ ಗೀತ ಸ್ವರಗಳು ।
ಅರೇ ನೋಡಿ,
ಗಂಡಸರು ,ಹೆಂಗಸರು
ತಮ್ಮೊಳಗೆ ಸಿದ್ಧಗೊಳ್ಳುತ್ತಿದ್ದಾರೆ
ಸುದೀರ್ಘ ಪ್ರಯಾಣಕೆ
ಎಲ್ಲಾ ಕೋಣೆಗಳಲಿ ।
-ರವಿ ಮೂರ್ನಾಡು
ನಮ್ಮ ನಗರಗಳ ಅಪರಿಚಿತ ಬದುಕುಗಳನ್ನು ಉತ್ತಮವಾಗಿ ಕಟ್ಟಿಕೊಡುವ ಈ ಕವನವು,
ಪ್ರತ್ಯುತ್ತರಅಳಿಸಿ"ಆದರೆ,
ಕೆಳಬಿದ್ದಿವೆ ಕಿಟಕಿ ಪರದೆಗಳು
ಕೇಳಿಸದಾಗಿದೆ ಗೀತ ಸ್ವರಗಳು ।"
ಎನ್ನುವ ಕೆಲವೇ ಸಾಲುಗಳ ಮೂಲಕ ಇಡೀ ಚಿತ್ರಣವನ್ನು ಕಟ್ಟಿಕೊಡುತ್ತದೆ.