ಬುಧವಾರ, ಫೆಬ್ರವರಿ 6, 2013

"ಪ್ರೀತಿ" ಹೇಳಿದ ಪದಗಳನು ಗಂಟಲಿಗಿಳಿಸಿ ..!



ಒಪ್ಪಿಕೊಂಡ ಮೇಲೆ
ನಮ್ಮ ಮನೆಗೆ ಹಿಂತಿರುಗಿದೆವು
ನಾವು ಪ್ರೇಮಿಗಳು |
ಇಬ್ಬರಿಗೂ ತಡೆಯಿಲ್ಲದ ಪ್ರೀತಿ
ನಿಲ್ಲಿಸದಾದೆವು

ಬಂದು ನಿನ್ನ ಪ್ರೀತಿಯ
ಏಕಾಏಕಿ ಕಸಿದುಕೊಳ್ಳುತ್ತೇನೆ
ನೀನೇನು ಮಾಡಬಲ್ಲೆ?

ಸಣ್ಣ ಪೊದೆಯೊಳಗೆ
ಬೆಳೆಯುತ್ತಿದೆ ಕಪ್ಪು ಎಳೆ |
ಹಳದಿಗರಳಿದ ಸೂರ್ಯ
ಕಿಟಕಿ ಸರಳಿಗಿಣುಕಿ ಕಿರಣ
ಇದೀಗ ಬೆತ್ತಲೆ |

ನೀ ನನ್ನ ನೋಡುತ್ತಿದ್ದೆ
ತಿನ್ನುವಂತೆ |
ನಾಲಗೆಯಿಳಿಸಿ ಬಾಯೊಳಗೆ
ತಿರುಗುವಂತೆ |

ಒಬ್ಬರಿಗೊಬ್ಬರು
ಅಭಿನಂಧನೆಗೆ ಕಾದೆವು
ಆದರೆ,
ಎಲ್ಲರಿಗೂ ಗೊತ್ತಿದೆ
ಪ್ರೀತಿ ದಿವಾಳಿಯಂತೆ !

ಎದೆಗಳಿಗೆ, ಮುಂದಿನ ವೆಚ್ಚದ ಪಟ್ಟಿ
ಉಡುಪು ತೊಟ್ಟ ಬೊಂಬೆಯ
ಶೂನ್ಯ ಮಧ್ಯಕೆ ಛೇದಿಸಿ 
ಸಮಾನ ಜನರ ಹಾಯುತಿದೆ
ಖಾಲಿ ಗಾಜು ಪ್ರತಿಫಲಿಸಿ |

ನಿಷೇಧಾತ್ಮಕವಾಗಿ,
ಹೇಳಿದ ಪದಗಳನು ಎಂಜಲಿಗದ್ದಿ
ಗಂಟಲಿಗಿಳಿಸುತ್ತಿದ್ದೇನೆ |
ನಾ ನಿನ್ನ ಪ್ರೀತಿಸುತ್ತೇನೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ 

2 ಕಾಮೆಂಟ್‌ಗಳು:

  1. ಈ ನಡುವೆ ಪ್ರೀತಿಯೂ ಪೊಳ್ಳೇ? ಇದ್ದೀತು ಈಗಿನ ಮತಲಬೀ ದುನಿಯಾದಲ್ಲಿ ನಗೆಯೂ ಮುಖವಾಡ ಹೊತ್ತ ಯಾವ ಭಾವವೋ?

    ಎರಡು ಮಾತೇ ಇಲ್ಲ ಕವಿವರ್ಯ, ನೀವೆ ಬರೆದಂತೆ:
    " ಎಲ್ಲರಿಗೂ ಗೊತ್ತಿದೆ
    ಪ್ರೀತಿ ದಿವಾಳಿಯಂತೆ !"

    ಪ್ರತ್ಯುತ್ತರಅಳಿಸಿ
  2. ಹಳದಿಗರಳಿದ ಸೂರ್ಯ
    ಕಿಟಕಿ ಸರಳಿಗಿಣುಕಿ ಕಿರಣ
    ಇದೀಗ ಬೆತ್ತಲೆ .....Super!!

    ಪ್ರತ್ಯುತ್ತರಅಳಿಸಿ