ತಾಯ ಗರ್ಭವದು
ನನ್ನ ಮಣ್ಣದು
ಮರಳಿ ಸೇರುವೆನು ಮನೆಗೆ |
ತ್ರಿವರ್ಣ ಸೀರೆಗೆ
ಜೀವನ ಚಕ್ರವಿದೆ
ಬಂಡಿ ಉರುಳಿ ತೆರೆದ ಹಣತೆ |
ತಂದೆ ಕಿರೀಟವಿದೆ
ತಾಯಿ ಪಲ್ಲಕಿಯಿದೆ
ರಾಜಹಂಸಕೆ ತಾಯ್ನೆಲದ ಕನಸು |
ಪತ್ನಿಯ ನಗುವಿದೆ
ಮಡಿಲಿಗೆ ಹೂವಿದೆ
ಚಿಗುರು ಗಿಡವಾಗಿ ಬೆಳೆದ ಮನಸು |
ತಾಯ ಭಾಷೆಯಿದು
ಕನ್ನಡ ನಮ್ಮದು
ಅಲ್ಲಿರಲಿ ಕೊನೆಗೆ ಉಸಿರು |
-ರವಿ ಮೂರ್ನಾಡು
ಮರಳಿ ಮಣ್ಣಿಗೆ ಯಾವಾಗ?
ಪ್ರತ್ಯುತ್ತರಅಳಿಸಿಆಶಯ ನಿಜವಾಗಲಿ, ಇಲ್ಲಿ ಇನ್ನೂ ಹೆಚ್ಚಿನ ವರಮಾನದ ಆತ್ಮ ತೃಪ್ತಿ ಕೊಡುವ ಕೆಲಸ ದೊರೆಯಲಿ. ಅಂತೆಯೇ ಇಲ್ಲಿ ಬದುಕು ಹಸನಾಗಲಿ.
ಸಂಗೀತ ಪಾಠ ಮುಂದುವರೆಸುವ ಅವಕಾಶವಾಗಲಿ. ಕಲಿಕೆಗೆ ವಯೋಮಾನವೇ?