ಬುಧವಾರ, ಡಿಸೆಂಬರ್ 26, 2012

ಭೂಮಿಯ ಮೇಲೆ ಶಾಂತಿ...

ಚಿತ್ರ ಕೃಪೆ: ಅಂತರ್ಜಾಲ

ಬಿಲ್ಲುಗಾರ ಎಚ್ಚರವಿದ್ದಾನೆ |
ಹಗಲಿನ ವಿರುದ್ಧ ರಾತ್ರಿ
ಅದೋ ಹಾರುವ ರಾಜಹಂಸಕೆ
ಹೂಡಿದ ಬಾಣ ಮಲಗಿದೆ |
ಸ್ವರ್ಗಕ್ಕೆ ಬೇಟೆ ನಡೆಯುತ್ತಿದೆ -
ನಿಶ್ಚಿಂತ ನಿದ್ದೆ ನಾಳೆಯವರೆಗೆ |

ಕರಡಿಗಳು ವಿದೇಶದಲ್ಲಿವೆ
ಕಿರುಚುತ್ತಿವೆ ಹದ್ದುಗಳು|
ಕಂಗಳು ಮಿನುಗುತ್ತಿವೆ |
ಹಗಲಿನ ವಿರುದ್ಧ ರಾತ್ರಿ
ನಿಶ್ಚಿಂತ ನಿದ್ದೆ ನಾಳೆಯವರೆಗೆ |

ಸಹೋದರಿಯರು ಕೋಮಲ-
ಕೈಗಳೆಣೆದು ಮಲಗಿದ್ದಾರೆ |
ಮುಡಿಗಳು ಸರ್ಪಗಳಂತೆ-
ಸುತ್ತಿ ಹೊಳೆಯುತ್ತಿವೆ|
ಹಗಲಿನ ವಿರುದ್ಧ ರಾತ್ರಿ
ಆಲಿಸುವ ನಕ್ಷತ್ರ ಪುಂಜಗಳ
ಖಡ್ಗಗಳು ಝಳಪಿಸುತ್ತಿವೆ |
ಸ್ವರ್ಗಕ್ಕೆ ಬೇಟೆ ನಡೆಯುತ್ತಿದೆ -
ನಿಶ್ಚಿಂತ ನಿದ್ದೆ ನಾಳೆಯವರೆಗೆ |
-ರವಿ ಮೂರ್ನಾಡು

2 ಕಾಮೆಂಟ್‌ಗಳು:

  1. ನಿಶ್ಚಿಂತ ನಿದ್ದೆ ನಾಳೆಯವರೆಗೆ ಎಂದು ಭೂಮಿಯ ಮೇಲಿರುವ ಅಶಾಂತಿಯನ್ನು ಪರಿಣಾಮಕಾರಿಯಾಗಿ ಕವಿತೆಯ ಕ್ಯಾನ್ವಾಸ್ ಮೇಲೆ ತಂದಿದ್ದೀರಿ ರವಿಯಣ್ಣ. ಮಾನವನ ಪ್ರತಿಯೊಂದು ನಡೆಯೂ ಭೂಮಿಗೆ ಅಶಾಂತಿಯನ್ನು ಅಹ್ವಾನಿಸಿ, ಬದುಕನ್ನು ನರಕಕ್ಕೆ ದೂಡುವ ಅಡಿಗಳ್ಳುಗಳಂತೆ ಕವಿಮನಕ್ಕೆ ಭಾಸವಾಗುವುದನ್ನು ಕವಿತೆ ಪರಿಣಾಮಕಾರಿಯಾಗಿ ನಿರೂಪಿಸಿದೆ. ಮಾನವನ ಅಮಾನವೀಯತೆಯ ಮುಖಗಳ ಅನಾವರಣ ಈ ಕವಿತೆ. ಮೆಚ್ಚಿದೆ.

    ಪ್ರತ್ಯುತ್ತರಅಳಿಸಿ
  2. ನಿಶ್ಚಿಂತ ನಿದ್ದೆ ನಾಳೆಯವರೆಗೆ, ಎಂದೇ ನಾವೂ ಮುಂದೂಡುತ್ತೇವೆ. ನಮ್ಮ ಪಾಪ ಕರ್ಮಗಳ ಹೊರೆ ಹೊತ್ತ ಧರಿತ್ರಿ ನಡುವೆ ಕುಸಿದು ಹೋಗಿರುತ್ತಾಳೆ!

    ಮೊದಲು ಅಂತರಂಗದ ಮನಸು ನಂತರ ಹೊರ ಜಗತ್ತು ಎರಡೂ ಅಶಾಂತ ಸಾಗರವೇ. ಒಪ್ಪ ಮಾಡಿಕೊಳ್ಳಲು ಹೊಣೆಗೇಡಿತನ ಮುಂದೂಡುತ್ತದೆ.

    ಅತ್ಯುತ್ತಮ ರಚನಾ ಕೌಶಲ್ಯ ಮತ್ತು ಕಾವ್ಯ ಹೂರಣ.

    ಪ್ರತ್ಯುತ್ತರಅಳಿಸಿ