ಶನಿವಾರ, ಡಿಸೆಂಬರ್ 15, 2012

ನನ್ನ ಪ್ರೀತಿಯೆಂದರೆ ..!ನನ್ನ ಪ್ರೀತಿಗಳೆಲ್ಲವೂ ಒಂದು ಕೆಂಪು
ಕೆಂಪೆಂದರೆ, ಗುಲಾಬಿ ತಬ್ಬಿದ ಕಂಪು
ಕಂಪೆಂದರೆ, ಸವಿಗಾಳಿ ಇಂಪು-
ಸಿಹಿ ರಾಗಕೆ ಅದು ಕಟ್ಟಿದ ಹಾಡು !

ಸ್ವಚ್ಛ ನನ್ನ ಒಲವು, ಅದಕ್ಕಿಂತ ಸ್ವಚ್ಛ-
ನನ್ನ ಪ್ರೀತಿಗೆ ನಿನ್ನ ಆಳದ ಹರವು
ಒಲವೇ ಪ್ರೀತಿಸುವೆನು ಎಂದಿಗೂ-
ಕೊನೆಗೂ, ಸಾಗರಗಳೆಲ್ಲಾ ಬತ್ತುವವರೆಗೂ

ಸಾಗರಗಳೆಲ್ಲಾ ಬತ್ತಿದ ಮೇಲೆ ಪ್ರೀತಿಯೇ
ಸೂರ್ಯನೊಂದಿಗೆ ಕಲ್ಲು ಕರಗುವರೆಗೂ-
ಪ್ರೀತಿಸುತ್ತಲೇ ಇರುವೆನು ಒಲವೇ
ಮರಳ ಕಣ ಜೀವ ಪಡೆದು ಓಡುವವರೆಗೂ

ನನ್ನ ಪ್ರೀತಿಯೇ ಶುಲ್ಕವಿಲ್ಲದ ಬಾಡಿಗೆ-
ಉಳಿಸಿ ತೊರೆಯಲಾಗದ ಯಜಮಾನನೇ
ಮತ್ತೆ ಬರುವನು, ಪ್ರೀತಿಗೆ ಈ ಬಾಡಿಗೆದಾರ
ನೆನಪಿಗೂ ಬಾಡಿಗೆ ಬೇಡುವವರೆಗೂ
-ರವಿ ಮೂರ್ನಾಡು

2 ಕಾಮೆಂಟ್‌ಗಳು:

 1. ಸಾಗರಗಳೂ ಬತ್ತುವ ಆ ಅಂತ್ಯ ಗಳಿಗೆಯಲೂ ಪ್ರೀತಿ ಕಾಯ್ದು ಕೊಳ್ಳುವ ಕವಿಯ ಆಶಯ ಮೆಚ್ಚುಗೆಯಾಯ್ತು.

  ಶುಲ್ಕವಿಲ್ಲದ ಬಾಡಿಗೆ ಪದ ಪ್ರಯೋಗ ಮನಸ್ಸಿಗೆ ನಾಟುತ್ತದೆ.

  ಇಷ್ಟು ಪ್ರೀತಿಸುವ ಶಕ್ತಿ ನನಗೂ ಬರಲಿ.

  ಪ್ರತ್ಯುತ್ತರಅಳಿಸಿ
 2. ಕವನ ಚೆನ್ನಾಗಿದೆ ರವಿ ಸರ್ :) ಇನ್ನಷ್ಟು ಬರೆಯಿರಿ.

  ಸ್ವಚ್ಚ ಸರಿಯಾದದ್ದು ಅನ್ನಿಸುತ್ತಿದೆ, ಸ್ವಚ್ಛವಲ್ಲ :)

  ಪ್ರತ್ಯುತ್ತರಅಳಿಸಿ