ಚಿತ್ರ ಕೃಪೆ: ಗೂಗಲ್ |
ದಿನ ದಿನಕ್ಕೊಂದಷ್ಟು
ಕನಸುಗಳ ಬಾಚಿದ್ದೇನೆ
ಬೊಗಸೆಯೊಳಗೆ !
ನಿಲ್ಲಲಾರದ ಕೆಲವಷ್ಟು
ಪ್ರಾಣ ಬಿಡುತ್ತಿವೆ
ಚೆಲ್ಲಿ ಕಣ್ಣೆದುರೇ..!
ಒಂದಷ್ಟು ಬಾಯಾರಿ
ಒಣಗಿ ಬಿಸಿಲಿಗೆ..!
ಉಳಿದಷ್ಟು ಬೆರಳ ಸಂದಿಗೆ
ಕರಗಿ ಮಳೆಗೆ
ನದಿಯಾಗಿ
ಈಜಲಾಗದ ಕಡಲಿಗೆ !
ಕತ್ತಲಾಗುತ್ತಿದೆ....
ಬೊಗಸೆ ಕನಸುಗಳ
ಹುಡುಕಿ ಕುರುಡಾಗಿ !
ಅವಶೇಷಗಳ ಲಾಲಿಸಿ
ಬೆಳಗಾಗಿದ್ದೇನೆ !
ಅಂಗಳ ತುಂಬಾ ತುಂಬಿಸಿ
ಹುಟ್ಟಿವೆ ಜೀವಗಳು ಇನ್ನಷ್ಟು
ಮತ್ತಷ್ಟು ಬಾಚಿದ್ದೇನೆ !
ಬೊಗಸೆ ಕಿವಿಯೊಳಗೇ ..
ಉಸುರುತ್ತೇನೆ ....
ಮತ್ತೇ ಹುಟ್ಟಿ ಬನ್ನಿ ಕನಸುಗಳೆ..!
ನಿಮ್ಮ ಅವಶೇಷಕೆ ಮಾತಾಗಿ
ಬರಲಿ ಜೀವಸೆಲೆ..!
-----------------------------------------------------------------------------------------------------
-ರವಿ ಮೂರ್ನಾಡು
ಆಗಾಗ ಹುಟ್ಟಿ ವಿನಾಕಾರಣ ಸಾಯುವ ಕನಸುಗಳಿದೆಯಲ್ಲಾ, ಅವು ನೋಯಿಸುವ ಪರಿ ವರ್ಣನಾತೀತ!!!
ಪ್ರತ್ಯುತ್ತರಅಳಿಸಿಅವು ಕಾಡುವ ಹೊತ್ತೂ ಮತ್ತು ಅದರ ನೆನಪು ಸಹ, ಥೇಟ್ ಅವಳಂತೆಯೇ!!!
ಚೆನ್ನಾಗಿದೆ ಮೂರ್ನಾಡರೇ :-)
ಪ್ರತ್ಯುತ್ತರಅಳಿಸಿ>>"ದಿನ ದಿನಕ್ಕೊಂದಷ್ಟು
ಕನಸುಗಳ ಬಾಚಿದ್ದೇನೆ
ಬೊಗಸೆಯೊಳಗೆ !
ನಿಲ್ಲಲಾರದ ಕೆಲವಷ್ಟು
ಪ್ರಾಣ ಬಿಡುತ್ತಿವೆ
ಚೆಲ್ಲಿ ಕಣ್ಣೆದುರೇ..!
"<<
ಇಷ್ಟವಾಯಿತು ..
ಇಷ್ಟವಾಯಿತು...
ಪ್ರತ್ಯುತ್ತರಅಳಿಸಿಆಗಾಗ ಬಂದು ಹೋಗುವ ಕನಸಗಳನ್ನು ಬೊಗಸೆಯೊಳಗೆ ತುಂಬಿಸುವ ಸುಂದವಾದ ಕವಿತೆ,ಇಷ್ಟವಾಯಿತು
ಪ್ರತ್ಯುತ್ತರಅಳಿಸಿಉತ್ತಮ ಕವನ,ಮನಮುಟ್ಟುವ ಸಾಲುಗಳು.
ಪ್ರತ್ಯುತ್ತರಅಳಿಸಿನನಸಾಗದ ಕನಸುಗಳಿಗೆ ಬೊಗಸೆಯೇ ಆಸರೆ.......
ಪ್ರತ್ಯುತ್ತರಅಳಿಸಿ