ಭಾನುವಾರ, ಏಪ್ರಿಲ್ 29, 2012

ಲೇಖನಿ


ಲೇಖನಿಯೊಂದು  
ಮಾತಿಗಿಳಿದಿದೆ
ಬಿಳಿ ಹಾಳೆಗೆ......!
ಏನ ಬರೆವುದು ?

ನರನರಗಳು ಸೆಟೆದು
ಗಂಟಿಕ್ಕಿ ಹೆಬ್ಬಲಕೆ ಉಬ್ಬಿ
ಬಿಡಲೊಲ್ಲದು ಹೆಬ್ಬೆರೆಳು-
ಆಣತಿಗೆ ಜಗ್ಗಲೆತ್ನಿಸುವುದು
ಬಗ್ಗಿ ಗಂಟಲ ನರಗಳುಬ್ಬಿ
ತೋರ್ಬೆರಳು !

ಅದಕ್ಕಷ್ಟೂ ಹೆಗಲೊತ್ತುಗಳು
ಹಿಡಿದೆತ್ತಿದೆ ನಡುಬೆರಳ ಸೊಂಟ
ಎಣಿಕೆ ನಾಲ್ಕರ ಬೆರಳು !
ಹಾಳೆ ಸ್ಪರ್ಶಕ್ಕದ್ದಿ
ತಿಕ್ಕಿ ಕಿರುಬೆರಳು ಸಿದ್ದ !
ಅಂಗೈಗೆ ಮುಖವಿಟ್ಟು
ಬಿಸಿ ಚೀಪುತ್ತಿದೆ !

ತೆರೆದು ಅಂಗಾಂಗದ ಕಣ್ಣು
ಮೌನ ಮಾತಿಗಿಳಿವುದು.......
ಉಕ್ಕೇರಿ ಎದೆಯಗಲಕೆ
ಮನೋ ತರಂಗಾಂತರ
ನರನರಗಳ ಕೊಳವೆಗೆ
ನುಗ್ಗಿ ಭೋರ್ಗರೆವದು ......
ಯಾವುದೀ ಸೃಷ್ಠಿ ಸಮಸ್ಥಿತಿ ಶಕ್ತಿ ?!
ಬೆರಳ ಖಂಡಗಳದುರಿಸಿ
ಲೇಖನಿ ಚಲಿಸಲೊಲಿಸಿದೆ  ...

ಕಿವಿ ನಿಮಿರಿ ಹುಬ್ಬೆತ್ತಿ
ಕಣ್ತೆರೆದು ಮೂಗ ಹೊಳ್ಳೆಗಳ
ಇಷ್ಟಗಲದ ಕೆಳಗೆ
ಬಾಯ್ತೆರೆದು ನಾಲಗೆ
ಅಕ್ಷರ ಸ್ಖಲಿಸಿದೆ !
ಈಗ.......
ಬಾಣಂತಿ ಬಿಳಿ ಹಾಳೆಗೆ ಕನಸು !
ಲೇಖನಿ ಆಕಳಿಸಿದೆ
ಮತ್ತೊಂದು ಬೆಳಿಗ್ಗೆಗಳ ಎಚ್ಚರಕೆ !
-ರವಿ ಮೂರ್ನಾಡು

1 ಕಾಮೆಂಟ್‌:

  1. ಲೇಖನಿಗೂ ಹಾಳೆಗೂ ಅವಿನಾಭಾವ ಸಂಬಂಧ. ಬರೆವ ಅಕ್ಷರಗಳ ಹಿಂದೆ ನೂರು ಭಾವ. ಬೆಳಲುಗಳ ಜೊತೆ ಮೆದುಳು ಇಡೀ ದೇಹವೇ ಸಜ್ಜು ಬರವಣಿಗೆಗೆ.

    ವಾವ್, ಎಲ್ಲಿಂದ ತತುತ್ತೀರ ರವಿ ಸಾರ್ ಇಂತಹ ಅಮೂಲ್ಯ ಕಾವ್ಯ ಪ್ರಯೋಗ?

    ಪ್ರತ್ಯುತ್ತರಅಳಿಸಿ