ಭಾನುವಾರ, ಮೇ 15, 2011

ತಾಜಮಹಲಿನ ಗೋರಿಯೊಳಗೆ...


ಮುಮ್ತಾಜಳ ಕುಪ್ಪಸದ ಮೇಲೆ
ಶಹಜಹಾನ್‍ ಕಟ್ಟಿಸಿದ ಗೋರಿಯೊಳಗೆ
ಈಗ, ನಿಗಿನಿಗಿ ಕೆಂಡದ ಉರಿ
ಪ್ರಣಯಿಗಳ ಮೈಬೆವರಿನ ಅತ್ತರು
ಪೋಲಿ ದನಗಳಿಗೆ ಮೇವು
ಜೋಡಿ ಹಕ್ಕಿಗಳ ಹಿಕ್ಕೆಗಳು..
                  
ಶಹಜಹಾನ್‍ ಲೇಪಿಸಿದ
ಗೋರಿಯ ಅತ್ತರಿಗೆ
ಮುಗಿಬಿದ್ದ ಜನರು
ಅಮೃತ ಶಿಲೆಯಲ್ಲಿ ಬೆತ್ತಲೆಯಾದರು
ಕೈ ಕಟ್ಟಿ ನಿಂತವರ
ವ್ಯಾನಿಟಿ ಬ್ಯಾಗ್‍ ತುಂಬಾ
ಪರದೇಶಿ ಮಾತ್ರೆಗಳು...

ಅಲ್ಲಲ್ಲಿ ಚಿವುಟಿ ಬಿಟ್ಟ
ಘಮಘಮಿಸಿದ ಹೂ-ಚಿಗುರುಗಳಿಗೆಲ್ಲಾ
ಈಗ, ಪಾಪ್‍ ಮ್ಯೂಜಿಕ್‍ನ ಮಂಪರು
ಗುಂಪು-ಗುಂಪಾಗಿ ಬಂದವರೆಲ್ಲಾ
ಅಲ್ಲಿ, ಹಾಟ್‍ ಬಾಕ್ಸಿನಲ್ಲಿಟ್ಟ ಜೇನ್ನೊಣಗಳು.

ಗೋರಿ ಹೇಳಿದ ಪ್ರೇಮದ ಕಥೆ
ಶವದೊಳಗಿನ ಪಿಸುದನಿಗಳು
ಗೋರಿಗೆ ಬಂದ ಒಂದು ಸುತ್ತಿನಲ್ಲಿ
ತುಟಿ-ತುಟಿಗಳ ಸ್ಪರ್ಶದಲಿ
ಚೀಪಿದ ಲಾಲಿ ಪಾಪ್‍ನ  ಸಿಹಿಯಲಿ
ಕೊನೆಯುಸಿರೆಳೆದಿವೆ.!

ಮುಮ್ತಾಜಳ ಎಲುಬಿನ ಕಾಂತಿ
ಗೋರಿಯಾದ ಶವದ ಕಥೆ
ಕಪ್ಪನ್ನೊದ್ದು ಮೈಚೆಲ್ಲಿದ
ರಸ್ತೆಯಲಿ ಅನಾಥವಾಗಿದೆ...!

ಕ್ಲಿಕ್ಕಿಸಿದ ಕ್ಯಾಮರಾ ಕಣ್ಣುಗಳನು
ಮಾಸಿದ ಐತಿಹಾಸಿಕ ಪುಟಗಳನು
ಗೆದ್ದಲುಗಳು ಸ್ವಚ್ಚಗೊಳಿಸುತ್ತಿವೆ....
---------------------------------------------------------------
-ರವಿ ಮೂರ್ನಾಡು

2 ಕಾಮೆಂಟ್‌ಗಳು:

  1. ಅಯ್ಯೋ ಶಿವನೇ... ಪ್ರೀತಿಯ ಮಹಲಿನ ಕಥೆಯು.. ಈ ರೀತಿಯು ಕಾಣುವುದೇ ಈಗ... ಈ ಬದಲಾವಣೆಗಳು ಮನಸ್ಸಿಗೂ ಮತ್ತು ಮನುಷ್ಯನಿಗೂ ಒಳ್ಳೆಯದು ಮಾಡೋದೇ ಇಲ್ಲ.. ಅನ್ನೋದೇ ನಮ್ಮ ಅಭಿಪ್ರಾಯ... :)

    ಪ್ರತ್ಯುತ್ತರಅಳಿಸಿ
  2. ಅಧ್ಬುತ ಪದಗಳಲ್ಲಿ , ಅಷ್ಟೇ ಸರಳವಾಗಿ , ಸುಂದರವಾಗಿ ಕವಿತೆ ಮೂಡಿ ಬಂದಿದೆ ರವಿ ಸರ್ . ಮಗುವೊಂದು ನಕ್ಕಂತೆ , ಆ ನಗುವ ಬಗೆಯನ್ನು , ನಾವು ಕಣ್ಮನಗಳಲ್ಲಿ ತುಂಬಿಕೊಂಡಥ ಅನುಭವವನ್ನ ಕೊಡುವಂಥ ಕವಿತೆ... ಮತ್ತು ಸತ್ಯ ಸರಳ ಸುಂದರ ಅನ್ನುವಂಥ ಕವಿತೆ.. ಮೊದಲಿನ ಕ್ಲಿಷ್ಟಕರವಾದ ಕವಿತೆಯನ್ನ ಓದಿ ಅರಗಿಸಿಕೊಳ್ಳಲು ಕಷ್ಟವಾಗುವಂಥ ಕವಿತೆಗಳನ್ನ (? !) , ಇವೆಲ್ಲ ಪರಿಧಿಗಳನ್ನು ಮೀರಿದ ಕವಿತೆ.. ನಾನು ಒಂದೇ ಗುಕ್ಕಿಗೆ ನುಂಗಿಕೊಂಡೆ... ತುಂಬಾ ಇಷ್ಟವಾಯ್ತು...:)

    ಪ್ರತ್ಯುತ್ತರಅಳಿಸಿ