ಸೋಮವಾರ, ಜೂನ್ 18, 2012

ಹಸಿರ ಹಸಿವಿಗೆ ನೆರೆದ ಮೈಯಿದು

ಯಾರು ಕರೆದರೋ, ಎನ್ನ ತೆರೆದರೋ

ಬೆರಳ ರೇಖೆಗೆ ತಬ್ಬಿ

ಉಸಿರ ಗಾಳಿಗೆ ಬಿಸಿಯ ಸುರಿಯುತಾ

ಬೆಟ್ಟ ಸ್ಪರ್ಶಕೆ ಉಬ್ಬಿ


ಲಜ್ಜೆ ಮರೆತಿದೆ,ರಾಗ ಮೌನಕೆ

ಭಾನು ಭೂಮಿಗೆ ಬಗ್ಗಿ

ಜಲವ ತೆರೆಯುತಾ ತೊರೆಯ ಉಕ್ಕಿಸಿ

ನೊರೆಯ ಜಳಕಕೆ ಹಿಗ್ಗಿ


ಹಸಿರ ಹಸಿವಿಗೆ ನೆರೆದ ಮೈಯಿದು

ಹಕ್ಕಿ ಊಟಕೆ ಹಣ್ಣು

ಹಗಲು ಲಯದಲಿ, ರಾತ್ರಿ ಸೃಷ್ಠಿಗೆ

ಮುಚ್ಚಿ ತೆರೆದಿದೆ ಕಣ್ಣು.

2 ಕಾಮೆಂಟ್‌ಗಳು:

  1. ಮಳೆಯ ಸ್ವಾಗತಕ್ಕೆ ಒಳ್ಳೆಯ ಕವನ.

    ಭಹುವಿ ಬಾನಿನ ಮಿಲನೋತ್ಸವ ಶುರುವಾಗಲಿ ಬೇಗ...

    ಪ್ರತ್ಯುತ್ತರಅಳಿಸಿ