Art By.M.S.Moorty |
ಅನುಭವಕ್ಕೆ ಸಿಕ್ಕ ಸುಕ್ಕುಗಳಲಿ
ಕೆದರಿ ಸೋತಿವೆ ಬಿಳಿ ಕೂದಲು
ತಬ್ಬಿಕೊಂಡ ಜೋಡಿ ಬೈತಲೆ ಮೈಗಳು
ಆಗಾಗ್ಗೆ ಬೆದರಿ ನೋಡುತ್ತಿವೆ
ಹಿಂಬದಿ ತಬ್ಬಿದ ನೆರಳುಗಳು
ಬೆತ್ತಲೆ ಬೆನ್ನಿನ ಹುಟ್ಟು ನರಗಳಲಿ
ಮೆಟ್ಟಿಲ ಹುಡುಕಿವೆ ಜಡೆಗಳು
ಇದೀಗ ಮೂರ್ತವಾಯಿತು
ಮಲಗಿ ಸಪೂರ ಬೆಟ್ಟದೆಗಲಿಗೆ
ಚಾಚಿ ಎಡೆಮುರಿ ಕಟ್ಟಿ ಕೈಕಾಲು
ಇದೊಂದು ರೇಖೆ
ಮೂರಡಿಗೆ ಅಳೆದ ಕೋಲು
ಬಿಳಿಗೂದಲು-ಬೆತ್ತಲೆ ಮೈ
ಸಾವಧಾನಕೆ ಕುಳಿತಿದೆ
ಕುಳಿತಂತಿದೆ..
ಇನ್ನೇನು ಎತ್ತೊಯ್ಯುವರು
http://avadhimag.com/?p=54701
ಚೆನ್ನಾಗಿದೆ ಗುರುಗಳೇ..
ಪ್ರತ್ಯುತ್ತರಅಳಿಸಿಸಾವಾಧನಕೆ=ಸಾವಧಾನಕೆ
ಎತ್ತೋಯ್ಯುವರು=ಎತ್ತೊಯ್ಯುವರು
ಅಲ್ಲವೇ ಅನಿಸಿತು..
ಮೈಯಲ್ಲಿ ಕಸುವಿರೋ ತನಕ ನೂರೆಂಟು ಆಸೆಗಳು. ಅದೇ ಬತ್ತಿದ ಮೇಲೆ ಒಣ ಕನಸುಗಳಂತೆ, ದೇಹ ಭಾವಗಳೂ ಒಣಗಿ ಹೊತ್ತೊಯ್ಯುವ ಚಿಂತೆಯೇ ತುಂಬುವುದು..ಇಂದ ಮರೆತು ನಿನ್ನೆ, ನಾಳೆಗಳ ಚಿಂತೆಯಲಿ ಕಳೆಯುವುದೇ, ಚಿಂತೆಯೇ ಬದುಕೇ ?
ಮಾನ್ಯ ಪ್ರಶಸ್ತಿ ತಿದ್ದಿದ್ದಕ್ಕೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿಮನಪೂರ್ವಕವಾಗಿ ತಲೆ ಬಾಗುತ್ತೇನೆ. ವಂದನೆಗಳು.
ಸಾರ್, ಯಾಕೋ ನನ್ನ ವೃದ್ಧಾಪ್ಯದ ಘೋರ ಭವಿಷ್ಯವನ್ನು ಬರೆದಿಟ್ಟಿರೇನೋ ಅನಿಸಿತು. ಯಾವ ಗಳಿಗೆಯಲ್ಲಿ ಯಾವುದು ಸತ್ಯವೋ ಅದೇ ಮೂರ್ತ ಅಂತಿಟ್ಟುಕೊಂಡರೆ ಈ ಪರಿಯ ಪ್ರೇಮದ ಅಮೂರ್ತತೆಯೂ ಬಲು ಕಾಡುತ್ತದೆ.
ಪ್ರತ್ಯುತ್ತರಅಳಿಸಿನನ್ನನ್ನು ತೀವ್ರ ಚಿಂತನೆಗೆ ಹೊತ್ತೊಯ್ಯುವ ನಿಮ್ಮ ಬರಹ ಮತ್ತು ಕವನಗಳಿಗೆ ನನ್ನ ಶರಣು.
ರೇಖೆ ಚೆನ್ನಾಗಿದೆ ರವಿ ಸರ್ .
ಪ್ರತ್ಯುತ್ತರಅಳಿಸಿ