ಮಂಗಳವಾರ, ಜನವರಿ 3, 2012

ಮಾತು ಬರೆದ ಹಾಡು


ಎಲ್ಲೋ ತೇಲಿಸುತ್ತಿದೆ
ಗಾಳಿ ತಂದ ಹಾಡು
ಏನೋ ನೋವು
ದಿಗಿಲಿಗೆ ಬಿದ್ದಿದೆ ಎದೆಯು

ನಾನೇನು ಹೇಳಿದೆನೋ
ಅವರೇನು ತಿಳಿದರೋ
ಗೋಡೆಯಾಗಿದೆ ಮನವು

ಏನೋ ಹೇಳುತ್ತಿದೆ
ರಾಗ ಹಿಡಿದ ಮಾತು
ಉಸಿರಿಗೆ ಬಡಿದ ಸ್ವರವೂ

ನಡೆದ ಹೆಜ್ಜೆನ್ನಿಡಿದು
ಕಳೆದೆ ಹಾಜರಿ ನೆನೆದು
ಕರೆದಿದೆ ಎದೆಪುಟಗಳ ತೆರೆದು

ತಡೆಯಿತೋ ಸ್ವಾಭಿಮಾನ
ಮುಚ್ಚಿದರೂ ಮುಚ್ಚದ ಪ್ರೀತಿ
ಎಬ್ಬಿಸಿತೋ ಲೋಕದ ನೀತಿ

ನುಗ್ಗಲಿ ಗಾಳಿ ಹಾಡು
ಎದೆಗೂ ಕಿವಿ ಬಂದು ಗುನುಗಿ
ತೆರೆದಿದೆ ಮನ ಇದೋ ಕ್ಷಮಿಸಿ
-ರವಿ ಮೂರ್ನಾಡು.


1 ಕಾಮೆಂಟ್‌:

  1. ಮನಸ್ಸುಗಳ ನಡುವೆ ತುಸು ಮಾತಿನ ವೈಪರಿತ್ಯ ಬಂದಾಗ ಹೀಗಾಗುತ್ತದೆ.

    ಮನಸ್ಸು ಆ ಗಳಿಗೆಯಲ್ಲಿ ಸಿಟ್ಟಿಗೆದ್ದರೂ ಆ ನಂತರ ಅದನ್ನು ವಿಶ್ಲೇಷಿಸಿ ತನ್ನ ತಪ್ಪಿನ್ನು ಅರಿವು ಮಾಡಿಕೊಳ್ಳುತ್ತದೆ.

    ಕ್ಷಮಿಸಿ ಎನ್ನುವ ಅಂತ್ಯದಲ್ಲೇ ಒಂದು ಸುಂದರ ಆರಂಭವಿದೆ.

    ಈ ದಿನದ ಉತ್ತಮ ಕವಿತೆಯಾಗಿ ನಾನು ಇದನ್ನೇ ಸ್ವೀಕರಿಸಿದ್ದೇನೆ.

    ಪ್ರತ್ಯುತ್ತರಅಳಿಸಿ