ಶುಕ್ರವಾರ, ಅಕ್ಟೋಬರ್ 7, 2011

ಕನಸುಗಳು ಮಾರಾಟಕ್ಕಿವೆ..!


ನೀನೇನು ಕೊಟ್ಟೆ ನನಗೆ ?
ಎಷ್ಟೇ ಚೆಲ್ಲಿದರೂ
ಮುಗಿಯದ ದುಃಖ್ಖದ ಬಿಂದಿಗೆ !
ಮಗುಚಿದರೂ ಕೊನೆಯಿಲ್ಲದ
ನೆನಪಿನ ಹೊತ್ತಗೆ..!

ಒಂದು ಬದುಕಿನ ಕೂಗಿಗೆ
ನೀ ನಡೆದೆ ಹಗಲಿಗೆ
ಬಿಚ್ಚಿದರೂ ಬಿಚ್ಚದ ಗಂಟಿಗೆ
ನಾ ಬಂಧಿಯಾದೆ ರಾತ್ರಿಗೆ..!

ನೀನೇನು ಕಳೆದೆ ನನಗೆ ?
ಒಂದು ಹನಿ ಬೊಗಸೆಗೆ
ಹನಿ ನದಿಯಾಗಿ ನರನಾಡಿಗೆ
ಕಡಲಾಗಿ ನನ್ನೆದೆಗೆ...!

ನಿನ್ನೆರಡು ಕಂಗಳ ಕಾಂತಿಗೆ
ಒಲುಮೆ ಹಚ್ಚಿ ಹಣತೆಗೆ
ನೀನಿಟ್ಟ ಪ್ರೀತಿ ಬತ್ತಿಗೆ
ಕಂಬನಿ ತೈಲಕೆ

ಭಾವಗಳಿದೋ ಹರಾಜಿಗಿವೆ
ನಾಲ್ಕು ದಿನಗಳ ಬಾಳಿಗೆ
ಮನಸ್ಸು ಸಂತೆಯ ಭಿಕರಿಗೆ
ಕನಸುಗಳು ಬೆತ್ತಲೆಯಿದೆ..!
------------------------------------------------
-ರವಿ ಮೂರ್ನಾಡು

2 ಕಾಮೆಂಟ್‌ಗಳು:

  1. Im not having words to comment sir...Superb...!!!

    kanasugalu maratakkive....

    ee line ne boo sogasaagide....

    ಪ್ರತ್ಯುತ್ತರಅಳಿಸಿ
  2. ಕಂಬನಿಯ ತೈಲ ವ್ಹಾವ್! ಅದಿನ್ನೆಂತಹ ಕವಿ ಪ್ರಯೋಗ ನಿಮ್ಮದು ರವಿ ಸಾರ್? ಸಮರ್ಥ ಕವಿಯ ಸಶಕ್ತ ಕವನ ಇದು.

    ಪ್ರತ್ಯುತ್ತರಅಳಿಸಿ