ಗುರುವಾರ, ಅಕ್ಟೋಬರ್ 6, 2011

ಹಣತೆಗಳ ಹಾಡು..!


ರಾತ್ರಿಗಳ ಜಾತ್ರೆಗೆ ಹಣತೆಗಳ ಮೆರವಣಿಗೆ
ಬೆಳಕಿಗೆರಡರಂತೆ ಕಣ್ಣುಗಳು
ಹಣತೆಗಳ ತಬ್ಬಿವೆ ಬೆರಳುಗಳು
ಹೆಜ್ಜೆಯಿಕ್ಕಿವೆ ಕೆಳಗದರ ನೆರಳುಗಳು

ಬೆಳಕಿನ ಗೆರೆಗಳಲಿ ಧರೆ ಗೀಚಿ ರಂಗೋಲಿ
ಆಗಸದ ಬೀದಿಯಲ್ಲೀಗ ದೀಪಾವಳಿ
ಕಿರೀಟದ ಚಂದಿರನಿಗೆ ಇಷ್ಟಗಲದ ನಗು
ಚಿಕ್ಕೆಗಳ ಮೆರೆವಣಿಗೆಯಲ್ಲಿ ಮುಗಿಲು

ಚಿಕ್ಕೆಗಳ ಮುತ್ತಿಟ್ಟು ತುಟಿ ಸುಟ್ಟ ಬೆಳಕು
ಮುಗಿಲಪ್ಪಿ ಧರೆಗಿಳಿದ ಪಟಾಕಿ-ಮತಾಪು
ಬೆಳಕೇ ಬೆಳಕು,ಕಣ್ಣೊಳಗೆ ಹಣತೆಗಳು
ಭೂಮಂಡಲಕೆ ನರ್ತನದ ತಳುಕು

ಜಗದಗಲ ಸಂತಸಕೆ ಕದ ತೆರದ ಮನೆಗಳು
ನುಗ್ಗುತ್ತಿವೆ ಮೆರವಣಿಗೆ ದೀಪಗಳು
ಮನೆ ತೊರೆದು ಹೊರನಡೆದ ಕಗ್ಗತ್ತಲು
ದಣಿವಾರಿಸುತ್ತಿವೆ ಹಣತೆ ಕಣ್ಣುಗಳು

----------------------------------------------------
-ರವಿ ಮೂರ್ನಾಡು.

5 ಕಾಮೆಂಟ್‌ಗಳು:

  1. ಕಾವ್ಯ ಮನಸ್ಸಿಗೊಪ್ಪಿದಾಗಲೇ, ಅದು ಧನ್ಯ.

    ಈ ಕವಿತೆ ನಾನು ಕುಣಿದಾಡ ಬೇಕು ಎನ್ನುವಂತೆ ಪ್ರೇರೇಪಿಸಿತು. ಭಾಷೆಯ ಸದ್ಭಳಕೆ, ಸಮ ತೂಕದ ನಡಿಗೇ, ಪದಗಳ ಚಿತ್ತಾರ ಮತ್ತು ಅನನ್ಯ ಲಯ...

    ವ್ಹಾವ್! ನಿಮ್ಮ ಕಾವ್ಯಕ್ಕೆ ಇದೋ ನನ್ನ ಸಲಾಂ.

    ಪ್ರತ್ಯುತ್ತರಅಳಿಸಿ
  2. ಬಾನಾಡಿ ಸ್ವಗತಕ್ಕೆ ಕದ ತೆರದ ಮನೆಗಳು , ರವಿಯವರೆ, ಈ ಸಾಲು ಮಾತ್ರ ಇಷ್ಟ ಆಗಲಿಲ್ಲ. ಬಾನಾಡಿಯ ಬದಲು ಬೇರೇನಾದರೂ ಹಾಕಬಹುದೇ .. ಕವನ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  3. ಖಂಡಿತಾ ಈಶ್ವರಣ್ಣ ಬದಲಾಯಿಸುತ್ತೇನೆ.ನನಗೂ ಆ ಸಂದರ್ಭದಲ್ಲಿ ಭಾವ ಗೊಂದಲದಲ್ಲಿತ್ತು. ಸಲಹೆಗೆ ಧನ್ಯವಾದಗಳು
    ಬದರಿ ಸರ್, ಸ್ಪೂರ್ತಿಗೆ ನೀವೇ ಸಾಟಿ.ಧನ್ಯವಾದಗಳು.
    ಡಾ. ಮೂರ್ತಿ ಸರ್, ನಿಮ್ಮ ಅಂತಃಕರಣಕ್ಕೆ, ನನ್ನದೊಂದು ಕಂಬನಿ.ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ನಿಮ್ಮ ಕವನಗಳಿಗೆ ಮತ್ತೆ ಮತ್ತೆ ಓದಿಸಿಕೊಳ್ಳುವ ಅನೂಹ್ಯ ಆಕರ್ಷಣೆ ಇದೆ.. ಪದಗಳ ಲಾಲಿತ್ಯ ಸ್ವಲ್ಪವೂ ಆಭಾಸವೆನಿಸದೇ ಮನಸ್ಸು ಇಷ್ಟಪಡುವ೦ತೆ ತಾನೇ ತಾನಾಗಿ ಮೆರೆಯುತ್ತಾ ಹೋಗುತ್ತದೆ! ಬಹುಶ: ನಾನು ಗುರುತಿಸಿದ ನಿಮ್ಮಲ್ಲಿನ ಕವಿಯ ಬಲು ದೊಡ್ಡ ತಾಕತ್ತೆ೦ದರೆ ಪದ ಲಾಲಿತ್ಯ.. ಆಗಲಿ... ನಿಮಗೆ.. ಒಳ್ಳೆಯದಾಗಲಿ...
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ಪ್ರತ್ಯುತ್ತರಅಳಿಸಿ