ಶನಿವಾರ, ಜೂನ್ 11, 2011

ಇಳೆಯೀಗ ಮಳೆಗೆ ...!


photo by:Leonid Afremov.
 born in Vitebsk, Belarus in 1955

ಇಳೆಯೀಗ ತುಂಬಿದ ಬಸುರಿ
ಈಗೀಗ ಸುರಿದ ಮಳೆಗೆ
ಹಸಿರು ಸೀರೆಗೆ ಹೂಗಳ ಕುಸುರಿ!

ಮುಖ ಉಬ್ಬಿದೆ ಬೆಟ್ಟ
ಹಣೆಗೆ ಬಿಂದಿ ಚಂದಿರ
ಕೆಳಗೆ ಮೂಗುತಿ ನಕ್ಷತ್ರ
ಬೆಟ್ಟ ಮುಚ್ಚಿದೆ
ಮುಡಿ ಬಿಚ್ಚಿದ ಮೋಡ..!

ಆಗಸ ತುಂಬಿದ ಬಿಂದಿಗೆ
ದೋ..! ಎಂದ ಇಳೆಯ ಜಳಕ
ಮುಡಿ ಜಾರಿದ ನದಿ
ತಗ್ಗು-ದಿಣ್ಣೆಗೆ ಬಡಿದ ಜಲಪಾತ
ಇಳೆ ನಿಂತ ನೆಲ ಕಡಲು..!

ಇಳೆಯೀಗ ತುಂಬಿದ ಬಸುರಿ
ಫಲಭರಿತ ತೋಟ-ತೋಪು
ತೆನೆಬಿಟ್ಟ ಗದ್ದೆ-ಬಯಲು
ಜುಳುಜುಳು ನದಿ-ತೊರೆ-ಹಳ್ಳ
ಇಳೆಯ  ಕೈಬಳೆ ನಾದ

ಇಳೆಯೀಗ ಹಸಿರು ಬಾಣಂತಿ
ಹಣ್ಣುದುರಿ ಬೀಜ ಮೆತ್ತಿದ ಮಣ್ಣು
ತೆನೆ ಬಾಗಿ ನೆಲ ನೋಡಿದ ಕಣ್ಣು
ಅಮ್ಮ...  ಎಂದ ಗಾಳಿ ಜೋಕಾಲಿ
ತೊಟ್ಟಿಲು ತೂಗಿದವು ಹಕ್ಕಿ ಚಿಲಿಪಿಲಿ
-----------------
-ರವಿ ಮುರ್ನಾಡು

3 ಕಾಮೆಂಟ್‌ಗಳು:

 1. ನಿಮ್ಮ ಕವಿತೆಗಳಲ್ಲಿ ಪದ ಲಾಲಿತ್ಯದ ಸೊಗಸನ್ನು ಸ್ವತ: ಅನುಭವಿಸಿಯೇ ತೀರಬೇಕು ಮೂರ್ನಾಡರೇ!
  ಇಳೆಯೀಗ ತುಂಬಿದ ಬಸುರಿ
  ಈಗೀಗ ಸುರಿದ ಮಳೆಗೆ
  ಹಸಿರು ಸೀರೆಗೆ ಹೂಗಗಳ ಕುಸುರಿ
  ಹಣ್ಣುದುರಿ ಬೀಜ ಮೆತ್ತಿದ ಮಣ್ಣು
  ... ತೆನೆ ಬಾಗಿ ನೆಲ ನೋಡಿದ ಕಣ್ಣು

  ಪ್ರಾಸ ಹಾಗೂ ಪದ ಬಳಕೆಯಲ್ಲಿ ನೀವು ಸೂಪರ್ರೀ..ಸೂಪರ್ರೂ......
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  ಪ್ರತ್ಯುತ್ತರಅಳಿಸಿ
 2. ಪ್ರಸವದ ನೆಪದಲ್ಲಿ ಇಳೆಯ ಧರ್ಶನ. ಭಾಷಾ ಬಳಕೆ ಮತ್ತು ಪ್ರಸ್ತುತಿಯಲ್ಲೂ ತೊಟ್ಟಲ ತೂಗೋ ಲಾಲಿತ್ಯವಿದೆ.

  ಅಪರೂಪದ ಕಾವ್ಯ ಲಕ್ಷಣಗಳನ್ನು ಮೈಗೂಡಿಸಿಕೊಂಡ ಕವಿ ನೀವು. ಇಡೀ ಬ್ಲಾಗನ್ನು ಉತ್ಕಲಿಸಿ ಸಾಹಿತ್ಯ ಉಪಾಸನೆ ಮಾಡುತ್ತೇನೆ.ೊಟ್ಟಲ ತೂಗೋ ಲಾಲಿತ್ಯವಿದೆ.

  ಅಪರೂಪದ ಕಾವ್ಯ ಲಕ್ಷಣಗಳನ್ನು ಮೈಗೂಡಿಸಿಕೊಂಡ ಕವಿ ನೀವು. ಇಡೀ ಬ್ಲಾಗನ್ನು ಉತ್ಕಲಿಸಿ ಸಾಹಿತ್ಯ ಉಪಾಸನೆ ಮಾಡುತ್ತೇನೆ.

  ಪ್ರತ್ಯುತ್ತರಅಳಿಸಿ