ಸೋಮವಾರ, ಸೆಪ್ಟೆಂಬರ್ 19, 2011

ಕಸದ ತೊಟ್ಟಿ(ಯ)ಲ ಮಗು


ಯಾರವಳು ತಾಯಿ..?
ಬಲಿತ ನನ್ನ ,ರಕುತಕ್ಕೆ ಅದ್ದಿ
ಕಸದ ತೊಟ್ಟಿಗೆ ಎಸೆದವಳು ?
ತನ್ನೊಡಲ ಮಾಂಸವನ್ನೇ
ವಾಂಛೆ ಹಸಿವಿಗೆ ತಿಂದವಳು

ಎದೆ ಹಾಲ ರುಚಿಗೆ
ಬೆಳೆದ ಮುದ್ದೆ ನಾನು
ಗರ್ಭದಲ್ಲೇ ಕನಸ ಕೊಂದವಳು
ರಾತ್ರಿಗೆ ಜಡೆ ನೇಯ್ದು
ನೊಣಗಳಿಗೆ ಮೂಗನಿಟ್ಟು
ಆಸೆ-ಬಿಸುಪಿಗೆ ನನ್ನ,
ಹರಾಜಿಗಿಟ್ಟವಳು.

ನೋಡಲ್ಲಿ ಸೂರ್ಪನಕಿ....!
ನಾಯಿಗಳಿಗೆ ಕಿರೀಟ ಬಂದಿವೆ.
ಗೆಜ್ಜೆ ಕಟ್ಟಿವೆ ಕಾಗೆಗಳು
ವಿವೇಚನೆ ಮರೆತಿವೆ ರಣ-ಹದ್ದುಗಳು
ಎಳೆದಾಡುತ್ತಿವೆ ಹೂವಂತ ಕಾಲುಗಳು.

ಕೆಲವಕ್ಕೆ ಹೃದಯ
ದಾಹಕ್ಕೆ ನೆತ್ತರು
ನೊಣ ಮುಚ್ಚಿವೆ ಹಾಲ್ದುಟಿ
ನೇಣುಗಂಬಕ್ಕೇರುತ್ತಿವೆ ನನ್ನ ಕತ್ತು..!

ನೀನೊಂದು ವಾಂಛೆಯ  ಹೆಣ್ಣೋ
ಕುಡಿದ ನೀರೆಲ್ಲಾ ಎದೆ ಹಾಲ ನಂಜೋ
ಸುಖದ ಬತ್ತಳಿಕೆಯಲ್ಲಿ
ಜಗದಲ್ಲೇ ಬೆತ್ತಲೆ ಕೂಗಿ
ಎದೆ ಸೀಳಿದೆ  ಮೊರೆತ
ನೀನೊಂದು ಭುವಿ
ನಾ ನಿನ್ನ ನಾಭಿಗಂಟಿದ ಬಳ್ಳಿ..!

ಅರಿಯದಾದೇನೋ ವಿಧಿ ಬರಹ
ಯಾರವನು ನನ್ನ ಪಿತ ?
ಏಕಾದೇನೋ ನಿಮ್ಮಿಬ್ಬರ ಪಿಂಡ
ಗೊತ್ತಿದ್ದರೆ ಕರಗುತ್ತಿದ್ದೆನೋ
ಗರ್ಭದೊಳಗೆ.....!
ತೆರೆಯದಾದೆ ಕಂಗಳ ಕತ್ತಲೊಳಗೆ
-ರವಿ ಮೂರ್ನಾಡು.

9 ಕಾಮೆಂಟ್‌ಗಳು:

  1. ತುಂಬಾ ಸಮರ್ಥವಾಗಿ ಶಬ್ಧಗಳನ್ನ ಬಳಸಿದ್ದೀರಿ ರವಿಯವರೇ. ಅದರಲ್ಲೂ ಕೊನೆಯ ಸಾಲು ತುಂಬಾ ಚೆನ್ನಾಗಿದೆ. ಕತ್ತಲಲ್ಲಿ ತೆರೆಯದಾದೆ ಕಣ್ಣುಗಳ.!

    ಈಶ್ವರ ಕಿರಣ್

    ಪ್ರತ್ಯುತ್ತರಅಳಿಸಿ
  2. Oduttiddare mai jummennuttade. padagala balake tumbaa chennaagi moodi bandide, manassannu kalakuttade, kroora jagattinalli mugda manassina chitrana.

    ಪ್ರತ್ಯುತ್ತರಅಳಿಸಿ
  3. ಹೊರಲಾರದೆ ಹೆರಬಾರದು! ಯಾಕೆ ತಾಯಂದಿರಿಗೆ ಇಂಥ ಅನಿವಾರ್ಯತೆಯೋ?

    ಭಾಷಾ ಪ್ರಾವೀಣ್ಯದಲ್ಲಿ ನಿಮಗೆ ಸಾಟಿ ನೀವೆ ರವಿ ಸಾರ್. ಲಾಲಿತ್ಯ ಮತ್ತು ಭಾವನಾತ್ಮಕ ಕವನ.

    ಪ್ರತ್ಯುತ್ತರಅಳಿಸಿ
  4. ಮನಕಲಕುವಂತೆ ಕವಿತೆ. ಸಮಾಜದಲ್ಲಿ ಈಗಲೂ ಕಂಡುಬರುವಂತಾಹಾ ವಿಕೃತ ದೃಶ್ಯವಿದು. ಕ್ಷಣಿಕ ಸುಖಕ್ಕಾಗಿ ದಂಡತೆತ್ತ ಎಷ್ಟೋ ಹೆಣ್ಣುಮಕ್ಕಳ ಕತೆಯಿದು. ಆ ಪಾಕಕೂಪಕ್ಕೆ ತಳ್ಳಿದವನ ವಿಕಾರ ಮುಖವಿದು. ನಿರೂಪಣೆ ತುಂಬಾ ಚೆನ್ನಾಗಿದೆ ರವಿಯಣ್ಣ.

    ಪ್ರತ್ಯುತ್ತರಅಳಿಸಿ
  5. ಓ! ರವಿ ಸರ್ ಈ ಕವಿತೆಯನ್ನು ಅದೆಂತು ನಾ ಬಣ್ಣಿಸಲಿ.ಮನ ಕಲುಕಿ ಮರುಗುವ ಈ ಅರ್ಥಪೂರ್ಣ ಕವಿತೆ ವಿಸ್ತಾರವಾದ ಚಿಂತನೆಗೆ ಎಡೆ ಮಾಡಿದೆ.ನೊಂದವರು ,ಅಶಕ್ತರು,ತುಳಿತಕ್ಕೆ,ಶೋಷಣೆಗೆ ಒಳಗಾದವರ ನೋವಿಗೆ ಧ್ವನಿ ನೀವು.ಇಂಥ ಒಬ್ಬ ಅದ್ಭುತ ಕವಿಯ ಒಡಲಾಳದ ಆಶಯವನ್ನು ಗ್ರಹಿಸಿ ಆಸ್ವಾದಿಸುವ ಅವಧಾನತೆ ಎಲ್ಲರಲ್ಲೂ ಬರಬೇಕು.ಈ ಕವಿತೆ ನನ್ನ ಹೃದಯದ ಆಳಕ್ಕೆ ಇಳಿಯಿತು.

    ಪ್ರತ್ಯುತ್ತರಅಳಿಸಿ
  6. ಓ! ರವಿ ಸರ್ ಈ ಕವಿತೆಯನ್ನು ಅದೆಂತು ನಾ ಬಣ್ಣಿಸಲಿ.ಮನ ಕಲುಕಿ ಮರುಗುವ ಈ ಅರ್ಥಪೂರ್ಣ ಕವಿತೆ ವಿಸ್ತಾರವಾದ ಚಿಂತನೆಗೆ ಎಡೆ ಮಾಡಿದೆ.ನೊಂದವರು ,ಅಶಕ್ತರು,ತುಳಿತಕ್ಕೆ,ಶೋಷಣೆಗೆ ಒಳಗಾದವರ ನೋವಿಗೆ ಧ್ವನಿ ನೀವು.ಇಂಥ ಒಬ್ಬ ಅದ್ಭುತ ಕವಿಯ ಒಡಲಾಳದ ಆಶಯವನ್ನು ಗ್ರಹಿಸಿ ಆಸ್ವಾದಿಸುವ ಅವಧಾನತೆ ಎಲ್ಲರಲ್ಲೂ ಬರಬೇಕು.ಈ ಕವಿತೆ ನನ್ನ ಹೃದಯದ ಆಳಕ್ಕೆ ಇಳಿಯಿತು.

    ಪ್ರತ್ಯುತ್ತರಅಳಿಸಿ
  7. ಟೀವೀ ಮಾಧ್ಯಮಗಳಲ್ಲಿ ಕೇಳಿದ , ನೋಡಿದ ಮತ್ತು ಪತ್ರಿಕೆಗಳಲ್ಲಿ ಓದಿದ ಸುದ್ದಿಗಳು ನೆನಪಾಗಿ ಈ ಕವನದಲ್ಲಿ ಏನೂ ವಿಶೇಷತೆ ಇಲ್ಲ ಎಂಬಂತೆ ಅನಿಸಿದರೂ ಸಹ , ಆ ನಿಮ್ಮ ಪದಗಳ ಪ್ರಯೋಗದಲ್ಲಿ ಪ್ರತೀ ಸಾಲಲ್ಲೂ ವಿಷಯ ವರ್ಣನೆ ಸೊಗಸಾಗಿದೆ.. ಮಗುವಿನ ಕಲ್ಪನೆಯಲ್ಲಿ ಕಾಣುವ ದುಃಖವು ಆ ಮಗುವಿನ ಮನದಲ್ಲಿ ತಾಯಿ ಪ್ರೀತಿಯನ್ನೇ ಪ್ರಶ್ನೆಯನ್ನಾಗಿಸಿದೆ.. ಏಕೆ ಈ ರೀತಿಯ ಘಟನೆಗಳು ಎಂಬ ಆಲೋಚನೆ ಬೇಸರ ಮೂಡಿಸುತ್ತದೆ.. ಕವನದ ಶೀರ್ಷಿಕೆ ಮತ್ತೊಮ್ಮೆ ಕವನವ ಓದುವಂತೆ ಆಕರ್ಷಿಸುತ್ತದೆ.. ಕಹಿ ಸತ್ಯವನ್ನು ಸುಂದರವಾಗಿಸುವ ಕವನ... :)

    ಪ್ರತ್ಯುತ್ತರಅಳಿಸಿ
  8. ಮನಮುಟ್ಟುವ ಕರುಣಾಜನಕ ರಸಕಾವ್ಯ ಈ ಕವಿತೆ.ಈ ಬಗ್ಗೆ ಹಿಂದೆಯೇ ಅಭಿಪ್ರಾಯಿಸಿದ್ದೆ.ಕರುಳ ಬಳ್ಳಿಯನ್ನು ಕಿತ್ತು ಹಿಚುಕುವ ಇಂಥ ಭಾವನೆಗಳಿಗೆ ನಾ ಬಂಧಿಯಾಗಿ ಬಿಡುತ್ತೇನೆ.

    ಪ್ರತ್ಯುತ್ತರಅಳಿಸಿ